Sunday, September 20, 2026

BDA Apartments

ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತಾ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ...
Home Front Page  ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತಾ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ – ಸಂಸದ ಡಿ.ಕೆ ಸುರೇಶ್…

 ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತಾ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ – ಸಂಸದ ಡಿ.ಕೆ ಸುರೇಶ್…

ಬೆಂಗಳೂರು,ಅಕ್ಟೋಬರ್,1,2020(www.justkannada.in):  ಆರ್ ಆರ್ ನಗರ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತ ನಾನು ಹೇಳುತ್ತಿಲ್ಲ. ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತಾ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿದರು.jk-logo-justkannada-logo

ಈ ಕುರಿತು ಇಂದು ಮಾತನಾಡಿದ ಡಿ.ಕೆ ಸುರೇಶ್, ಮುನಿರತ್ನ ನನ್ನ ಸಂಪರ್ಕಕ್ಕೆ ಬಂದಿಲ್ಲ.  ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ರೆ ಮುನಿರತ್ನ ಕಾಂಗ್ರೆಸ್ ಗೆ ಈ ಬಗ್ಗೆ ನಮ್ಮ ನಾಯಕರು ನಿರ್ಧರಿಸುತ್ತಾರೆ. ಮುನಿರತ್ನಗೆ ಟಿಕೆಟ್ ಸಿಗಲ್ಲ ಅಂತಾ ನಾನು ಹೇಳಿಲ್ಲ. ಟಿಕೆಟ್ ಸಿಗಲ್ಲ ಅಂತಾ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಮುನಿರತ್ನ ನನಗೆ ಒಳ್ಳೆಯ ಸ್ನೇಹಿತ ಆದರೆ ರಾಜಕೀಯ ಶತ್ರು ಎಂದರು.

ಇನ್ನು ಆರ್ ಆರ್ ನಗರ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಅಭಿಪ್ರಾಯ ಪಡೆದಿದ್ದೇವೆ. ಬಾಲಕೃಷ್ಣ, ಕುಸುಮ ರವಿ ಹೆಸರು ಕೇಳಿ ಬಂದಿದೆ. ಆದರೆ ನಾನು ಉಪಚುನಾವಣೆಗೆ ಸ್ಪರ್ಧಿಸಲ್ಲ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: Muniratna -no ticket- BJP activists – MP-DK Suresh.