ಎಷ್ಟೇ ಖರ್ಚಾದರೂ ಸರಿ ಅವರನ್ನ ಜೈಲಿಗೆ ಕಳಿಸದೇ ಬಿಡಲ್ಲ- ಭಾವುಕರಾಗಿಯೇ ರಮೇಶ್ ಜಾರಕಿಹೊಳಿ ಹೇಳಿಕೆ…

ಬೆಂಗಳೂರು,ಮಾರ್ಚ್,9,2021(www.justkannada.in): ನನ್ನನ್ನ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ.  ಸಿಡಿ ಮಾಡಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ. ರಾಜಕಾರಣಕ್ಕೆ ಬರ್ತೀನೋ ಇಲ್ವೋ ಗೊತ್ತಿಲ್ಲ. ಆದರೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳಿಸದೇ ಬಿಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.jk

ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಭಾವುಕರಾಗಿ,  ನಾನು ಬಹಳ ದುಃಖದಲ್ಲಿದ್ದೇನೆ. ನನ್ನ ಕುಟುಂಬದ ಮರ್ಯಾದೆ ಹೋಗಿದೆ. ಅದು ವಾಪಸ್ ಬರಬೇಕು. ಸಿಡಿ ಬಿಡುಗಡೆಯಾದ ಬಳಿಕ ಮೊದಲು ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣ ಕರೆ ಮಾಡಿ ಧೈರ್ಯ ಹೇಳಿದ್ರು. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಸಿಡಿ ಮಾಡಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಯುವತಿಗೆ 50 ಲಕ್ಷ ಅಲ್ಲ 5 ಕೋಟಿ ನೀಡುರುವ ಮಾಹಿತಿ ಇದೆ. ವಿದೇಶದಲ್ಲಿ 2 ಅಪಾರ್ಟ್ ಮೆಂಟ್ ನೀಡುರುವ ಬಗ್ಗೆ ಮಾಹಿತಿ ಇದೆ. ಇದರ ಬಗ್ಗೆ ನಾನೇಕೆ ದೂರು ನೀಡಲಿ. ಆರೋಪವನ್ನ ನಾನು ಧೈರ್ಯವಾಗಿ ಎದರಿಸುತ್ತೇನೆ . ನನ್ನ ವಿರೋಧಿಗಳಿಗೆ ಇದು ದೊಡ್ಡ ಅಸ್ತ್ರವಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಬಿಡಲ್ಲ. ಎಷ್ಟೇ ಖರ್ಚಾದರೂ ಸರಿ ಅವರನ್ನ ಜೈಲಿಗೆ ಕಳಿಸದೇ ಬಿಡಲ್ಲ ಎಂದು ಹೇಳಿದರು.

former minister-Ramesh jarakiiholi -sent – prison- Conspiracy
ಕೃಪೆ-internet

ಕಳೆದ ವರ್ಷ ಫೆಬ್ರವರಿಯಲ್ಲಿ ನಾನು ಸಚಿವನಾಗಿದ್ದೆ. ಆಗ ಒಬ್ಬ ಮಹಾನ್ ನಾಯಕ ನನಗೆ ಚಾಲೆಂಜ್ ಹಾಕಿದ್ದ. ಇಲಾಖೆಯನ್ನ ಕೇವಲ 3 ತಿಂಗಳು ನಡೆಸ್ತಾನೆಂದಿದ್ದ. ನಾನು ರಾಜ್ಯವೇ ಮೆಚ್ಚುವಂತೆ ಇಲಾಖೆ ನಡೆಸಿದ್ದೆ. ಹೀಗಾಗಿ ನನ್ನ ವಿರುದ್ದ ಆಮಹಾನ್ ನಾಯಕ ಷಡ್ಯಂತ್ರ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

 

Key words: former minister-Ramesh jarakiiholi -sent – prison- Conspiracy