Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ನಟಿ ರಾಗಿಣಿ ಹೊಸ ಚಾನೆಲ್ ಶುರು ಮಾಡಿದ್ದೇಕೆ ?!

ನಟಿ ರಾಗಿಣಿ ಹೊಸ ಚಾನೆಲ್ ಶುರು ಮಾಡಿದ್ದೇಕೆ ?!

ಬೆಂಗಳೂರು, ಮಾರ್ಚ್ 09, 2021 (www.justkannada.in): ನಟಿ ರಾಗಿಣಿ ತಮ್ಮದೇ ಯೂ ಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಾರೆ.

ಹೌದು. ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಸಕ್ರಿಯರಾಗಿರುವ ರಾಗಿಣಿ ಮತ್ತೊಂದು ಹೊಸ ಕೆಲಸಕ್ಕೆ ಕೈಹಾಕಿದ್ದಾರೆ.

ಈ ಚಾನೆಲ್ ನಲ್ಲಿ ತಮ್ಮ ಅಡುಗೆ ವಿಡಿಯೋ, ಟಿಪ್ಸ್ ಇತ್ಯಾದಿಗಳನ್ನು ಜನರ ಮುಂದಿಡಲಿದ್ದಾರೆ. ಅಂದಹಾಗೆ ಇನ್ ಸ್ಟಾಗ್ರಾಂ ಹಾಗೂ ಫೇಸ್ ಬುಕ್ನಲ್ಲಿ ರಾಗಿಣಿ ಅಡುಗೆ ವಿಡಿಯೋಗಳನ್ನು ಪ್ರಕಟಿಸುತ್ತಿರುತ್ತಾರೆ. ಇದೀಗ ಇದಕ್ಕಾಗಿ ಯೂಟ್ಯೂಬ್ ನಲ್ಲಿ ಹೊರ ಚಾನೆಲ್ ಶುರು ಮಾಡಿದ್ದಾರೆ.

ಜೈಲಿನಿಂದ ವೃತ್ತಿರಂಗಕ್ಕೆ ಮರಳಿರುವ ನಟಿ ರಾಗಿಣಿ ಸಾಕಷ್ಟು ಸಕ್ರಿಯರಾಗಿ, ಈಗ ಹೊಸ ಕೆಲಸಕ್ಕೆ ಕೈಹಾಕಿದ್ದಾರೆ.