ಲೋಕಸಭಾ ಚುನಾವಣೆ ವೇಳೆ ಸುಳ್ಳು ದಾಖಲೆ ಸಲ್ಲಿಸಿದ ಆರೋಪ : ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ…

Promotion

ಬೆಂಗಳೂರು,ಸೆ,6,2019(www.justkannada.in): ಲೋಕಸಭಾ ಚುನಾವಣೆ ವೇಳೆ ಸುಳ್ಳು ದಾಖಲೆ ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ  ಎದುರಾಗಿದೆ.

ಸಮನ್ಸ್ ಸ್ವೀಕರಿರಿಸದ ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಓರ್ವ ಸಂಸದ, ಜನಪ್ರತಿನಿಧಿಯಾಗಿ ಸಮನ್ಸ್ ಸ್ವೀಕರಿಸದಿದ್ದರೇ ಹೇಗೆ ಎಂದು ಹೈಕೋರ್ಟ್ ಕಿಡಿಕಾರಿದೆ. ಅಲ್ಲದೆ  ಪತ್ರಿಕೆಗಳಲ್ಲಿ ಸಮನ್ಸ್ ಪ್ರಕಟಿಸುವಂತೆ ನ್ಯಾಯಾಧೀಶರು  ಆದೇಶ ನೀಡಿದ್ದಾರೆ.

ಈ ಸಂಬಂಧ ಹೈಕೋರ್ಟ್  ಎರಡು  ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಸಂಸದ  ಪ್ರಜ್ವಲ್ ವಿರುದ್ಧ  ಮಾಜಿ ಸಚಿವ ಎ.ಮಂಜು, ವಕೀಲ ದೇವರಾಜ್ ಗೌಡ ದೂರು ದಾಖಲಿಸಿದ್ದರು.

Key words: MP Prajwal Revanna- – false –filing -Lok Sabha elections-highcourt