ಟೊಮ್ಯಾಟೋದಂತೆ ಈರುಳ್ಳಿಗೂ ಬೆಲೆ ಏರಿಕೆ ಬಿಸಿ ಸಾಧ್ಯತೆ! ಆಗಸ್ಟ್ ಕೊನೆಯಲ್ಲಿ ಈರುಳ್ಳಿ ಬೆಲೆ ಗಗನಮುಖಿ !?

ಬೆಂಗಳೂರು, ಆಗಸ್ಟ್ 05, 2023 (www.justkannada.in): ಆಗಸ್ಟ್‌ ತಿಂಗಳ ಕೊನೆಯಲ್ಲಿ ದೇಶದ ರಿಟೇಲ್‌ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳ ಶುರುವಾಗಲಿದೆ ಎಂಬ ಸಮೀಕ್ಷೆ ಮಾಹಿತಿಯೊಂದು ಹೊರಬಿದ್ದಿದೆ.

ಪೂರೈಕೆಯ ಕೊರತೆಯು ಬೆಲೆ ಏರಿಕೆಗೆ ಕಾರಣವಾಗಲಿದೆ. ಕೆ.ಜಿ.ಗೆ 60ರಿಂದ 70ರೂ.ವರೆಗೆ ಏರಿಕೆ ಕಾಣಲಿದೆ ಎಂದು ಕ್ರಿಸಿಲ್‌ ಸಂಸ್ಥೆಯ ಅಧ್ಯಯನ ವರದಿ  ಹೇಳಿದೆ.

ಈರುಳ್ಳಿ ಬೆಲೆಯು 2020ರಲ್ಲಿ ಕಂಡಿದ್ದ ಗರಿಷ್ಠ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ಕ್ರಿಸಿಲ್‌ ಸಂಸ್ಥೆಯ ಅಧ್ಯಯನ ವರದಿ ಅಂದಾಜು ಮಾಡಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್‌ ಆರಂಭದಿಂದ ಬೆಲೆಯು ಗಮನಾರ್ಹವಾಗಿ ಹೆಚ್ಚಳ ಆಗಲಿದೆ. ಬೆಲೆಯು 70 ರೂ.ವರೆಗೂ ತಲುಪಬಹುದು ಎನ್ನಲಾಗಿದೆ.

ಹಿಂಗಾರು ಹಂಗಾಮಿನ ಈರುಳ್ಳಿ ಹೆಚ್ಚು ಕಾಲ ಬಾಳಿಕೆ ಬರದಿರುವುದು ಹಾಗೂ ಈ ವರ್ಷದ ಫೆಬ್ರುವರಿ-ಮಾರ್ಚ್ ಅವಧಿಯಲ್ಲಿ ಈರುಳ್ಳಿಯನ್ನು ವಿಪರೀತ ಪ್ರಮಾಣದಲ್ಲಿ ಮಾರಾಟ ಮಾಡಿದ್ದ ಕಾರಣದಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಹಿಂಗಾರು ಬೆಳೆಯ ಸಂಗ್ರಹವು ಆಗಸ್ಟ್‌ ಕೊನೆಯಲ್ಲಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಅಧ್ಯಯನ ವರದಿ ವಿವರಿಸಿದೆ.