Thursday, August 13, 2026

BDA Apartments

Home Front Page ದಿನೇ ದಿನೇ ಶ್ರೀಮಂತೆಯಾಗುತ್ತಿರುವ ನಾಡ ಅಧಿದೇವತೆ: ಮೈಸೂರಿನ ಚಾಮುಂಡಿಬೆಟ್ಟ ದೇಗುಲದಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹ..

ದಿನೇ ದಿನೇ ಶ್ರೀಮಂತೆಯಾಗುತ್ತಿರುವ ನಾಡ ಅಧಿದೇವತೆ: ಮೈಸೂರಿನ ಚಾಮುಂಡಿಬೆಟ್ಟ ದೇಗುಲದಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹ..

ಮೈಸೂರು,ಡಿ,19,2019(www.justkannada.in); ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದಿನೇ ದಿನೇ ಶ್ರೀಮಂತೆಯಾಗುತ್ತಿದ್ದು ಚಾಮುಂಡಿ ಬೆಟ್ಟಕ್ಕೆ ಕಾಣಿಕೆ  ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹರಿದು ಬರುತ್ತಿದೆ.

ಚಾಮುಂಡಿ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು  ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ. ಈ‌ ಬಾರಿ 1,57,81,481 ರೂಪಾಯಿ ಸಂಗ್ರಹ ವಾಗಿದೆ. ಕಳೆದ ಭಾರಿ 1,10,55,892 ರೂ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ 47ಲಕ್ಷ ಅಧಿಕ ಹಣ ಸಂಗ್ರಹವಾಗಿದೆ.

ವಿಶೇಷ ದರ್ಶನ, ಲಾಡು ಹಾಗೂ ಸೀರೆ ಹರಕೆ ಅದಾಯ ಹೊರತುಪಡಿಸಿ ಕೋಟ್ಯಾಂತರ ಹಣ ಸಂಗ್ರಹವಾಗಿದೆ. ರಾಜ್ಯ, ದೇಶ ವಿದೇಶಗಳಿಂದಲೂ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ.

Key words: mysore- chamundi hills- record – money- Collection