ಕೊರೊನಾ ಸೆನ್ಸಾರ್: ನೋ ಕಿಸ್ಸಿಂಗ್, ಹಗ್ಗಿಂಗ್ ಸೀನ್ !

ಬೆಂಗಳೂರು, ಮೇ 29, 2020 (www.justkannada.in): ಸಿನಿಮಾ ಚಿತ್ರೀಕರಣ ಸಂದರ್ಭಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ನಿರ್ಮಾಪಕರ ಸಂಘ ಸಿದ್ಧಪಡಿಸಿದೆ.

ಕಲಾವಿದರು, ಸಿಬಂದಿಗೆ ಕೆಲವು ನಿತ್ಯ ಅಭ್ಯಾಸಗಳ ಸಲಹೆ ನೀಡಲಾಗಿದೆ. ಅದರಂತೆ, 45 ನಿಮಿಷ ಮೊದಲೇ ಸೆಟ್‌ಗೆ ಬರಬೇಕು, ಸಾಮಾಜಿಕ ಅಂತರ ಪಾಲಿಸಲು ನೆಲದ ಮೇಲೆ ಮಾರ್ಕಿಂಗ್‌ ಮಾಡಬೇಕು, ಸ್ನಾನ, ಕೈತೊಳೆಯುವಿಕೆಗೆ, ಸ್ವಚ್ಛತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಇನ್ನೊಂದೆಡೆ ಕೇಶ ವಿನ್ಯಾಸ, ಮೇಕಪ್‌ ಸಂದರ್ಭದಲ್ಲಿ ಉತ್ಪನ್ನಗಳನ್ನು ಒಮ್ಮೆ ಮಾತ್ರ ಬಳಸಬೇಕು, ವಿಗ್‌ಗಳನ್ನು ಬಳಕೆಗೆ ಮುನ್ನ, ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು, ಸ್ವಂತ ಮೇಕಪ್‌ ಕಿಟ್‌ ಬಳಸಬೇಕು, ಮೇಕಪ್‌ ಮಾಡುವಾಗ ಮಾಸ್ಕ್ ಬದಲು ಫೇಸ್‌ ಶೀಲ್ಡ್‌ಗಳನ್ನು ಧರಿಸಲು ಸಲಹೆ ನೀಡಲಾಗಿದೆ.

ಪ್ರಮುಖ ಮಾರ್ಗಸೂಚಿಗಳು ಹೀಗಿವೆ…

– ಎಲ್ಲರೂ ಮುಖಕ್ಕೆ ಮೂರು ಪದರಗಳ ವೈದ್ಯಕೀಯ ಮಾಸ್ಕ್, ಕೈಗವಸು ಧರಿಸುವುದು ಕಡ್ಡಾಯ

– ಚುಂಬನ, ಆಲಿಂಗನ, ಕೈಕುಲುಕುವುದು ಸೇರಿ ಯಾವುದೇ ರೀತಿಯ ದೈಹಿಕ ಶುಭಾಶಯಗಳಿಗೆ ಅವಕಾಶವಿಲ್ಲ

– ಸಹೋದ್ಯೋಗಿಗಳ ನಡುವೆ ಕನಿಷ್ಠ ಎರಡು ಮೀಟರ್‌ ಅಂತರ ಕಡ್ಡಾಯ

– ಚಿತ್ರೀಕರಣದ ಸೆಟ್‌, ಕಚೇರಿ, ಸ್ಟುಡಿಯೋಗಳಲ್ಲಿ ಸಿಗರೇಟ್‌ ಶೇರ್‌ ಮಾಡುವಂತಿಲ್ಲ

– 60 ವರ್ಷ ಮೇಲ್ಪಟ್ಟ ಕಲಾವಿದರು, ಸಿಬ್ಬಂದಿಯನ್ನು ಕನಿಷ್ಠ ಮೂರು ತಿಂಗಳು ಸೆಟ್‌ಗೆ ಕರೆಸುವಂತಿಲ್ಲ