ಉತ್ತರ ಕರ್ನಾಟಕ ಭಾಗದ ಶಾಸಕರ ಸಭೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್…

ಬೆಂಗಳೂರು,ಮಾ,29,2020(www.justkannada.in): ರಾಜ್ಯಸಭೆ ಸ್ಥಾನಕ್ಕೆ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದ್ದು ಉತ್ತರ ಕರ್ನಾಟಕ ಭಾಗದ ಶಾಸಕರು ಒಂದೆಡೆ ಸೇರಿ ಸಭೆ ನಡೆಸಿ ಚರ್ಚಿಸಿದ್ದಾರೆಂಬ ವರದಿಯಾಗಿತ್ತು.

ಇದೀಗ ಈ ಕುರಿತು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಲ್ಲರೂ ಸೇರಿ ಬಹಳ ದಿನ ಆಗಿತ್ತು. ಈಗಾಗಿ ಉಮೇಶ್ ಕತ್ತಿ ಅವರ ಮನೆಯಲ್ಲಿ ಸೇರಿ ಊಟ ಮಾಡಿದ್ದೇವೆ. ಈ ವೇಳೆ ಕಷ್ಟಸುಖ ಹಂಚಿಕೊಂಡಿದ್ದೇವೆ. ಸಿಎಂ ಬಿಎಸ್ ವೈ ವಿರುದ್ದ ಯಾವುದೇ ಅಸಮಾಧಾನದ ಚರ್ಚೆಯಾಗಿಲ್ಲ ಸಿಎಂ ಬಿಎಸ್ ವೈ ವಿರುದ್ದ ಬಂಡಾಯವಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲರೂ ಸೇರಿದ ವೇಳೆ ರಮೇಶ್ ಕತ್ತಿ ಹೆಸರು ರಾಜ್ಯಸಭೆ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ 3 ವರ್ಷ ಇರಬೇಕು ಅಂದರೂ ಒಪ್ಪಿಗೆ ಇದೆ, ಬದಲಾಗಬೇಕು ಅಂದರೂ ನಾವು ಸಿದ್ಧರಿದ್ದೇವೆ. ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು. ಬಿಎಸ್ ವೈ ನಮ್ಮ ಸಿಎಂ ಅಷ್ಟೇ ಎಂದು ಬಸನಗೌಡಪಾಟೀಲ್ ಯತ್ನಾಳ್ ತಿಳಿಸಿದರು.

Key words: Meeting – MLAs – North Karnataka-Basanagowda Patil Yatnal -clarified.