ರಂಗಾಯಣ ದುರುಪಯೋಗ: ಅಡ್ಡಂಡ ಕಾರ್ಯಪ್ಪ ವಿರುದ್ಧ ನ್ಯಾಯಾಂಗ ತನಿಖೆಯಾಗಲಿ-ಏಕವಚನದಲ್ಲೇ  ಪುಷ್ಪಅಮರನಾಥ್ ವಾಗ್ದಾಳಿ.

ಮೈಸೂರು,ಜನವರಿ,10,2023(www.justkannada.in): ಮಾನಸಿಕ ಸ್ಥಿತಿಪ್ರಜ್ಞೆ ಕಳೆದುಕೊಂಡಿರುವ ಅಡ್ಡಂಡ ಕಾರ್ಯಪ್ಪ ರಂಗಾಯಣ ದುರ್ಬಳಕೆ ಮಾಡಿಕೊಂಡಿದ್ದು ಇವನ ಮೇಲೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಏಕವಚನದಲ್ಲೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಡಾ.ಪುಷ್ಪ ಅಮರನಾಥ್, ಅಡ್ಡಂಡ ಕಾರ್ಯಪ್ಪ ಒಬ್ಬ ನೀಚ. ಇವನ ಹೆಸರು ಹೇಳಲು ನಾಚಿಕೆಯಾಗುತ್ತದೆ. ಅನ್ನಭಾಗ್ಯದ ಬಗ್ಗೆ ವ್ಯಂಗ್ಯ ಮಾಡುವ ಈ ತಿಕ್ಕಲ. ತಿಕ್ಕಲ ಅಡ್ಡಂಡ ಬಿಜೆಪಿ ಕುಮ್ಮಕ್ಕಿನಿಂದ ಈ ರೀತಿ ಮೆರೆಯುತ್ತಿದ್ದಾನೆ. ರಂಗಾಯಣವನ್ನ ದುರ್ಬಳಕೆ ಮಾಡಿಕೊಂಡು. ಸಿದ್ದರಾಮಯ್ಯನವರ ಭಾಗ್ಯಗಳನ್ನ ವ್ಯಂಗ್ಯ ಮಾಡುತ್ತಿದ್ದಾನೆ. ಇದಕ್ಕೆ ಬಿಜೆಪಿ ಸರ್ಕಾರದ ಕುಮ್ಮಕ್ಕು ಇದೆ. ಈ ಕುಮ್ಮಕ್ಕಿನಿಂದಲೇ ತಿಕ್ಕಲ ಅಡ್ಡಂಡ ಕಾರ್ಯಪ್ಪ ಈ ರೀತಿ ಆಡೋದು. ಬಿಜೆಪಿ ಏಜೆಂಟಾಗಿ ಈತ ಕೆಲಸ ಮಾಡುತ್ತಿದ್ದು, ಅಡ್ಡಂಡ ಕಾರ್ಯಪ್ಪನ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ರಂಗಾಯಣ ಸಂಸ್ಥೆಯನ್ನ ದುರುಪಯೋಗ ಪಡಿಸಿಕೊಂಡ ಇವನ ಮೇಲೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ನಿನಗೆ ಮಾನ ಮರ್ಯಾದೆ ಇಲ್ಲ. ನಿನ್ನ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತದೆ. ಸಿದ್ದರಾಮಯ್ಯನವರ ನಿಜವಾದ ಕನಸು ಹಸಿದವರಿಗೆ ಅನ್ನ ನೀಡುವುದು, ಪೌಷ್ಟಿಕ ಆಹಾರದ ಮೂಲಕ ಮಕ್ಕಳ ಆರೋಗ್ಯ ಹೆಚ್ಚಿಸಬೇಕು. ಅಂತ ಒಳ್ಳೆಯ ಯೋಜನೆಗಳನ್ನು ಕೊಟ್ಟರು ಅಂತ ಪುಣ್ಯಾತ್ಮನ ಬಗ್ಗೆ ಮಾತನಾಡುವ ನೈತಿಕತೆ ಈತನಿಗಿಲ್ಲ. ತಾಕತ್ತು ಧಮ್ಮು ಇದ್ದರೆ  ಬಿಜೆಪಿ ಸರ್ಕಾರ ಅಂತ ಒಂದು ಯೋಜನೆ ಜಾರಿಗೆ ತನ್ನಿ ನೋಡೋಣ ಎಂದು ಏಕವಚನದಲ್ಲೇ  ಅಡ್ಡಂಡ ಕಾರ್ಯಪ್ಪ ಮತ್ತು ಬಿಜೆಪಿ  ವಿರುದ್ಧ ಡಾ.ಪುಷ್ಪಾ ಅಮರನಾಥ್ ಕಿಡಿಕಾರಿದರು.

Key words: Misuse –Rangayana-Addanda Kariappa-congress-Pushpa Amarnath -mysore