ನೀರಿನ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ಸಾವು.

ಬೆಳಗಾವಿ,ನವೆಂಬರ್,10,2022(www.justkannada.in): ನಿರ್ಮಾಣ ಹಂತದ ನೀರಿನ ಸಂಪ್ ಗೆ ಬಿದ್ದು 4 ವರ್ಷದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಸವದತ್ತಿ ಪಟ್ಟಣದ ಗುರ್ಲಹೊಸೂರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶ್ಲೋಕ ಗುಡಿ(4) ಚಿದಾನಂದ ಸಾಳಂಕೆ(4) ಮೃತಪಟ್ಟವರು.  ಪ್ರಗತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಮಕ್ಕಳು ಓದುತ್ತಿದ್ದರು.

ಈ ನಡುವೆ ಮಕ್ಕಳು ಆಟವಾಡಲು ಹೊರ ಬಂದಾಗ ವಾಲ್ಮಿಕಿ ಭವನದ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ ಘಟನಾಸ್ಥಳಕ್ಕೆ ಸವದತ್ತಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words: Two children- died – falling – water sump-belgavi