ನಾಲ್ಕರಿಂದ ಆರು ಶಾಸಕರನ್ನ ಬಿಟ್ಟು ಬಹುತೇಕರಿಗೆ ಬಿಜೆಪಿ ಟಿಕೆಟ್- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

 

ಕಲ್ಬುರ್ಗಿ,ಮಾರ್ಚ್,7,2023(www.justkannada.in): ನಾಲ್ಕರಿಂದ ಆರು ಶಾಸಕರನ್ನ ಬಿಟ್ಟು ಬಹುತೇಕರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿ ಬಿಎಸ್ ಯಡಿಯೂರಪ್ಪ, ಬಿಜೆಪಿಗೆ ಯಾರು ಬರ್ತಾರೋ ಅವರನ್ನ ನಾವು ಸ್ವಾಗತಿಸುತ್ತೇವೆ. ವರಿಷ್ಠರು ಎಲ್ಲಿ ಹೇಳ್ತಾರೋ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಬಹುತೇಕ ಶೀಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು . ಮೋದಿ ಬಗ್ಗೆ ಮಲ್ಲಿಕಾರ್ಜುನ ರ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ಕಾಂಗ್ರೆಸ್ಸಿಗರು ರಾಜ್ಯಕ್ಕೆ ರಾಹುಲ್ ಗಾಂಧಿ ಯಾಕೆ ಕರೆತರುತ್ತಿಲ್ಲ.  ಕಾಂಗ್ರೆಸ್ಸಿಗರು ಬೇಕಾದರೇ ತಮ್ಮ ನಾಯಕರನ್ನ ಕರದು ಪ್ರಚಾರ ಮಾಡಲಿ ಎಂದು ಬಿಎಸ್ ವೈ ತಿಳಿಸಿದರು.

Key words: four – six -MLA- BJP- tickets-Former CM -BS Yeddyurappa.