ನಾವು ಬದುಕಿ ಬಂದಿದ್ದೇ ಪವಾಡ: ಇಲ್ಲಿವರೆಗೆ ನೀವು ಏನ್ ಮಾಡಿದ್ದೀರಿ..?- ಶಾಸಕನಿಗೆ ನೆರೆ ಪೀಡಿತ ಗ್ರಾಮಸ್ಥರಿಂದ ತರಾಟೆ…

ಕಲಬುರುಗಿ,ಅಕ್ಟೋಬರ್,18,2020(www.justkannada.in ಭೀಮಾ ನದಿ ಅಪಾಯ ಮಟ್ಟ ಹರಿಯುತ್ತಿದ್ದು ಕಲ್ಬುರ್ಗಿಯ ಹಲವು ಗ್ರಾಮಗಳ ಮನೆಗಳು ಜಲಾವೃತವಾಗಿ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಬಂದ ಶಾಸಕರೊಬ್ಬರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.jk-logo-justkannada-logo

ಕಲ್ಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಬಂಕಲಗಿ ಗ್ರಾಮಸ್ಥರು ಸ್ಥಳೀಯ ಕಾಂಗ್ರೆಸ್ ಶಾಸಕ ಎಂವೈ ಪಾಟೀಲ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭೀಮಾ ನದಿ ಪ್ರವಾಹದಿಂದಾಗಿ ಗ್ರಾಮ ಜಲಾವೃತವಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸಮಸ್ಯೆ ಆಲಿಸಲು ಆಗಮಿಸದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.miracle-flood-kalburgi- people-class- MLA

ನೀರು ಬಿಡುಗಡೆ ಬಗ್ಗೆ ಮಾಹಿತಿ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿ ನಾವು ಬದುಕಿ ಬಂದಿದ್ದೇ ಪವಾಡ. ವೋಟ್ ಪಡೆಯಲು ಮಾತ್ರ ನಾವು ಬೇಕು. ನಾವು ಸತ್ತಿದ್ದೀವಾ..? ಬದುಕಿದ್ದೀವಾ…? ಎಂದು ವಿಚಾರಿಸಿದ್ದೀರಾ..? ನಮ್ಮ ಬದುಕು ಬರ್ಬಾದ್ ಆಗಿದೆ. ಇಲ್ಲಿವರೆಗೆ ನೀವೇನು ಮಾಡಿದ್ದೀರಿ..? ಎಂದು ಗ್ರಾಮಸ್ಥರು ಶಾಸಕ ಎಂವೈ ಪಾಟೀಲ್ ಗೆ ತರಾಟೆ ತೆಗೆದುಕೊಂಡಿದ್ದಾರೆ.

Key words: miracle-flood-kalburgi- people-class- MLA