Thursday, September 24, 2026

BDA Apartments

Home Front Page ಇಂದಿನಿಂದ ಸಿಎಂ ಬಿಎಸ್ ವೈರಿಂದ ತವರು ಕ್ಷೇತ್ರದ ಪ್ರವಾಸ…

ಇಂದಿನಿಂದ ಸಿಎಂ ಬಿಎಸ್ ವೈರಿಂದ ತವರು ಕ್ಷೇತ್ರದ ಪ್ರವಾಸ…

ಬೆಂಗಳೂರು,ಅಕ್ಟೋಬರ್,18,2020(www.justkannada.in):  ಸಿಎಂ ಬಿ.ಎಸ್ ಯಡಿಯೂರಪ್ಪ ಇಂದಿನಿಂದ ತವರು ಕ್ಷೇತ್ರ ಶಿಕಾರಿಪುರ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 6 ತಿಂಗಳ ನಂತರ  ಸಿಎಂ ಬಿ.ಎಸ್. ಯಡಿಯೂರಪ್ಪ ಇಂದಿನಿಂದ ಮೂರು ದಿನ  ತವರು ಕ್ಷೇತ್ರ ಶಿಕಾರಿಪುರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಜೆ ವೇಳೆಗೆ ಬೆಂಗಳೂರಿನಿಂದ ಶಿಕಾರಿಪುರಕ್ಕೆ ಸಿಎಂ ಬಿಎಸ್ ವೈ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ತಮ್ಮ ಮನೆಯಲ್ಲಿ ತಂಗಲಿರುವ ಸಿಎಂ ಬಿಎಸ್ ವೈ ಅ. 19 ರಂದು ಕಲ್ಲುವಡ್ಡು ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.cm-bs-yeddyurappa-shikaripura-tour-from-today

ನಂತರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಬಿಎಸ್ ವೈ ಚಾಲನೆ ನೀಡಲಿದ್ದಾರೆ. ಅ.20 ರಂದು ಬೆಳಗ್ಗೆ 10.00ಕ್ಕೆ ಶಿಕಾರಿಪುರ ಸಾಂಸ್ಕಂತಿಕ ಭವನದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ನೆರವೇರಿಸಲಿದ್ದಾರೆ.

Key words: cm bs yeddyurappa-shikaripura- tour – from -today.