Saturday, November 14, 2026

Dasara Wishes

ಸವಣೂರಲ್ಲಿ ವ್ಯಕ್ತಿಗೆ ಕೊರೊನಾ: ದೃಢಪಡಿಸಿದ ಜಿಲ್ಲಾಧಿಕಾರಿ ವಾಜಪೇಯ DasraWishes_JK Da...
Happy Dasara
Home Front Page `ಶ್ರಮಿಕ್ ನಿವಾಸ್ ಜಾರಿ’: ಬೃಹತ್ ತಯಾರಿಕಾ ಘಟಕಗಳ ಬಳಿಯೇ ಕೆಲಸಗಾರರ ನೆಮ್ಮದಿಗೆ ಸೂರು-ಸಚಿವ ಎಂ.ಬಿ ಪಾಟೀಲ್

`ಶ್ರಮಿಕ್ ನಿವಾಸ್ ಜಾರಿ’: ಬೃಹತ್ ತಯಾರಿಕಾ ಘಟಕಗಳ ಬಳಿಯೇ ಕೆಲಸಗಾರರ ನೆಮ್ಮದಿಗೆ ಸೂರು-ಸಚಿವ ಎಂ.ಬಿ ಪಾಟೀಲ್

`ಶ್ರಮಿಕ್ ನಿವಾಸ್ ಜಾರಿ’: ಬೃಹತ್ ತಯಾರಿಕಾ ಘಟಕಗಳ ಬಳಿಯೇ ಕೆಲಸಗಾರರ ನೆಮ್ಮದಿಗೆ ಸೂರು-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ನವೆಂಬರ್,14,2026 (www.justkannada.in): ತಯಾರಿಕಾ ವಲಯದಲ್ಲಿ ಶ್ರಮದಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ತಾವಿರುವ ಕೈಗಾರಿಕೆಗಳ ಹತ್ತಿರದಲ್ಲೇ ಗುಣಮಟ್ಟದ ವಸತಿ ಸೌಕರ್ಯ ಕಲ್ಪಿಸುವ ಮಹದುದ್ದೇಶದಿಂದ ರಾಜ್ಯ ಸರಕಾರವು `ಶ್ರಮಿಕ್ ನಿವಾಸ್’ ನೀತಿಯನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆ ಕುರಿತ ನೀತಿಯನ್ನು  ಗುರುವಾರ (ನ.12) ಅನಾವರಣಗೊಳಿಸಿದ್ದಾರೆ

ಈ ಬಗ್ಗೆ ಮಾತನಾಡಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು, ‘ಶ್ರಮದಿಂದ ಕೂಡಿರುವ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ನೆಮ್ಮದಿ ನೀಡುವಂತಹ ಸೂರಿನ ವ್ಯವಸ್ಥೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಇದರಿಂದ ಅವರು ದಿನನಿತ್ಯವೂ ಬೇರೆಬೇರೆ ಊರುಗಳಿಂದ ಸಂಚರಿಸುವ ತೊಂದರೆ ತಪ್ಪಿ, ಉತ್ಪಾದಕತೆ ಹೆಚ್ಚುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳ ಸನಿಹದಲ್ಲೇ ಡಾರ್ಮಿಟರಿ, ಒಂದು ರೂಮಿನ ಮನೆ ಮತ್ತು ಎರಡು ರೂಮಿನ ಮನೆಗಳನ್ನು ಕಟ್ಟಿ, ಕೈಗೆಟುಕುವ ಬಾಡಿಗೆ ದರದಲ್ಲಿ ಅಥವಾ ಉಚಿತವಾಗಿ ವಾಸಕ್ಕೆ ಕೊಡಲಾಗುವುದು’ ಎಂದಿದ್ದಾರೆ.

‘ರಾಜ್ಯದ ಕೈಗಾರಿಕಾ ಪ್ರದೇಶಗಳು ಬೃಹತ್ ಹೂಡಿಕೆಗೆ ಅನುಕೂಲವಾಗುವಂಥ ಮತ್ತು ಆಕರ್ಷಣೀಯ ಸೌಕರ್ಯಗಳನ್ನು ಹೊಂದಿರಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಶ್ರಮಿಕ್ ನಿವಾಸ್ ಯೋಜನೆಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. 100 ಉದ್ಯೋಗಿಗಳಿಗೆ ವಸತಿ ಸೌಕರ್ಯ ಕೊಟ್ಟಲ್ಲಿ 1 ಕೋಟಿ ರೂ. ಸಬ್ಸಿಡಿ ಕೊಡಲಾಗುವುದು. ಇದೇ ರೀತಿಯಲ್ಲಿ 1,000 ಉದ್ಯೋಗಿಗಳಿಗೆ ಸೂರು ಕಲ್ಪಿಸಿದಲ್ಲಿ 10 ಕೋಟಿ ರೂ. ಮತ್ತು 2,500 ಕೆಲಸಗಾರರಿಗೆ ವಸತಿ ಸೌಕರ್ಯ ಒದಗಿಸಿದಲ್ಲಿ ಗರಿಷ್ಠ 25 ಕೋಟಿ ರೂ. ಸಬ್ಸಿಡಿ ಕೊಡಲಾಗುವುದು. ಬೃಹತ್ ಕೈಗಾರಿಕೆಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಅವರು ವಿವರಿಸಿದ್ದಾರೆ.

ಶ್ರಮಿಕ್ ನಿವಾಸ್ ಯೋಜನೆ ವಿನೂತನ ಪರಿಕಲ್ಪನೆ. ಇದರ ಅಡಿಯಲ್ಲಿ ಗರಿಷ್ಠ 10 ಚ.ಮೀ. ವಿಸ್ತೀರ್ಣದ ಡಾರ್ಮಿಟರಿ, ಗರಿಷ್ಠ 30 ಚ.ಮೀ. ವಿಸ್ತೀರ್ಣದವರೆಗೆ ಸಿಂಗಲ್ ಬೆಡ್ ರೂಮ್ ಇರುವಂತಹ ಮತ್ತು ಗರಿಷ್ಠ 60 ಚ.ಮೀ. ವಿಸ್ತೀರ್ಣದ ಡಬಲ್ ಬೆಡ್ ರೂಮ್ ಮನೆಗಳನ್ನು ಕಟ್ಟಲು ಅವಕಾಶವಿದೆ. ಆದರೆ, ಉದ್ಯಮಿಗಳು ಕೆಐಎಡಿಬಿ ಮೂಲಕ ತಮಗೆ ಮಂಜೂರಾಗಿರುವ ನಿವೇಶನದ ಒಳಗೇ ಇವನ್ನು ಕಟ್ಟುವುದು ಕಡ್ಡಾಯವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.`ಶ್ರಮಿಕ್ ನಿವಾಸ್ ಜಾರಿ’: ಬೃಹತ್ ತಯಾರಿಕಾ ಘಟಕಗಳ ಬಳಿಯೇ ಕೆಲಸಗಾರರ ನೆಮ್ಮದಿಗೆ ಸೂರು-ಸಚಿವ ಎಂ.ಬಿ ಪಾಟೀಲ್

ಡಾರ್ಮಿಟರಿಯಲ್ಲಿ ಉದ್ಯೋಗಿಗಳಿಗೆ ಹಾಸಿಗೆ, ಟೇಬಲ್, ಕಪಾಟು, ಲಾಕರ್ಸ್, ಸಾಮೂಹಿಕ ಅಡುಗೆಮನೆ ಮತ್ತು ಶೌಚಾಲಯಗಳು ಇರಲಿವೆ. ಸಿಂಗಲ್ ಮತ್ತು ಡಬಲ್ ಬೆಡ್-ರೂಮ್ ಮನೆಗಳಲ್ಲಿ ಪಡಸಾಲೆ (ಲಿವಿಂಗ್ ರೂಮ್), ಅಡುಗೆ ಮನೆ, ಸ್ನಾನದ ಮನೆ ಮತ್ತು ಶೌಚಾಲಯದ ಅನುಕೂಲಗಳನ್ನು ಕಲ್ಪಿಸಲಾಗುವುದು. ಜತೆಗೆ ಕೈಗಾರಿಕೆಗಳಿಗೆ ಇರುವ ದರದಲ್ಲೇ ನೀರು ಮತ್ತು ವಿದ್ಯುತ್ ಪೂರೈಸಲಾಗುವುದು. ಈ ಮನೆಗಳಲ್ಲಿ ಉದ್ಯೋಗಿಗಳು ವಾಸ ಮಾಡಲು ಶುರು ಮಾಡಿದ ದಿನದಿಂದ ಪರಿಗಣಿಸಿ, ಸಬ್ಸಿಡಿ ಹಣವನ್ನು 3 ವರ್ಷಗಳಲ್ಲಿ 3 ಸಮಾನ ಕಂತುಗಳಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಯೋಜನೆಯಡಿ ವರ್ಷಕ್ಕೆ ಗರಿಷ್ಠ 10 ಸಾವಿರ ಕೆಲಸಗಾರರಿಗೆ ವಸತಿ ಸೌಕರ್ಯ ಒದಗಿಸಬೇಕೆನ್ನುವುದು ನಮ್ಮ ಗುರಿಯಾಗಿದೆ. ಇನ್ನೂ ಹೆಚ್ಚಿನ ಕೆಲಸಗಾರರ ಕೋರಿಕೆಗಳನ್ನು ಮುಂದಿನ ವರ್ಷದಲ್ಲಿ ಪರಿಗಣಿಸಲಾಗುವುದು. ಯೋಜನೆಯ ಪ್ರಕಾರ, ಕಂಪನಿಗಳ ಕಾಯಂ ಉದ್ಯೋಗಿಗಳು ಮಾತ್ರ ಈ ಅನುಕೂಲ ಪಡೆಯಲು ಅರ್ಹರಾಗಿರುತ್ತಾರೆ. ಕೆಲಸಗಾರರ ಅವಲಂಬಿತರನ್ನು ಇದರಡಿ ಪರಿಗಣಿಸಲಾಗುವುದಿಲ್ಲ. ಒಂದು ಕಂಪನಿಗೆ ಗರಿಷ್ಠ 25 ಕೋಟಿ ರೂ.ವರೆಗೂ ಸಬ್ಸಿಡಿ ಕೊಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ನುಡಿದಿದ್ದಾರೆ.Shramik Nivas jk02_new jk02 new

ಕೆಲಸಗಾರರು ಕೈಗಾರಿಕೆಗಳ ಅವಿಭಾಜ್ಯ ಅಂಗ. ಪರಿಶ್ರಮದಿಂದ ಕೂಡಿದ ಕೆಲಸ ಮಾಡುವವರು ನೆಮ್ಮದಿಯಿಂದ ಇರಬೇಕು ಎನ್ನುವುದು ನಮ್ಮ ಸದಾಶಯ. ವಸತಿ ಸೌಕರ್ಯದಿಂದ ಕೆಲಸಗಾರರ ಅನಗತ್ಯ ಓಡಾಟ ತಪ್ಪಿ, ಕೈಗಾರಿಕೆಗಳ ಉತ್ಪಾದಕತೆಯೂ ಹೆಚ್ಚುತ್ತದೆ. ಇದರಿಂದ ರಾಜ್ಯದ ಆರ್ಥಿಕತೆಗೆ ಲಾಭವಾಗಲಿದೆ. ಹೀಗಾಗಿಯೇ ನಾವು ಶ್ರಮಿಕ್ ನಿವಾಸ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

 

English Summary
Title

Karnataka Shramika Nivasa Scheme: Affordable Worker Housing Near Manufacturing Units

Short Description
The Karnataka Shramika Nivasa Scheme is a state initiative providing affordable housing for workers near large manufacturing units and industrial hubs. Approved by the Karnataka Cabinet alongside industrial expansion led by Industries Minister M. B. Patil, the first phase targets 10,000 homes for factory, IT, and biotech employees. Through KIADB, participating companies receive subsidised land and up to 20% financial incentives in backward taluks to build residential complexes near workplaces. This reduces worker commute times and supports regional industrial growth across Karnataka.
Keywords
Shramik Nivas, Housing, Workers, Near, Large Manufacturing Units, Minister, M.B. Patil