ಬೆಂಗಳೂರು,ನವೆಂಬರ್,14,2026 (www.justkannada.in): ಪ್ರಧಾನಿ ಮೋದಿ ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಹುಲ್ ಗಾಂಧಿಯನ್ನು ವಿದೇಶದಲ್ಲಿ ಕೂತು ಕಂಟ್ರೋಲ್ ಮಾಡುತ್ತಾರೆ. ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್ ಅವರನ್ನ ಕಂಟ್ರೋಲ್ ಮಾಡುತ್ತಿದ್ದರು. ರಾಹುಲ್ ಗಾಂಧಿಯ ಫೋನ್ ಕದ್ದಾಲಿಕೆ ಮಾಡಲು ಇವರೇನು ಭಯೋತ್ಪಾದಕರಾ? ಭಯೋತ್ಪಾದಕ ಆಗಿದ್ರೆ ವ್ಯವಸ್ಥೆ ಖಂಡಿತ ಟ್ಯಾಪ್ ಮಾಡುತ್ತದೆ. ಆದರೆ ರಾಹುಲ್ ಗಾಂಧಿ ಅದಲ್ಲ ಎಂದು ಕುಟುಕಿದರು.
ರಾಹುಲ್ ಗಾಂಧಿ ಆಗಾಗ ಯಾಕೆ ವಿದೇಶಕ್ಕೆ ಹೋಗುತ್ತಾರೆ. ಇಂಧನ ಕಡಿಮೆ ಆದಾಗ ವಿದೇಶಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋಗಿ ಕೇಳಿಸಿಕೊಂಡು ಬಂದು ಇಲ್ಲಿ ಹೇಳುತ್ತಾರೆ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ವಿಷಯ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗಿದರು.






