ರವಿಕೃಷ್ಣಾ ರೆಡ್ಡಿ ಮತ್ತು ಎನ್.ಆರ್. ರಮೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಸಚಿವ ಕೆ.ಜೆ ಜಾರ್ಜ್….

ಬೆಂಗಳೂರು,ನ,25,2019(www.justkannada.in):  ನನ್ನ ಮೇಲೆ ಆಧಾರರಹಿತ ಆರೋಪ  ಮಾಡಿದ್ದಾರೆ ಎಂದು ಆರೋಪಿಸಿ ರವಿಕೃಷ್ಣಾ ರೆಡ್ಡಿ ಮತ್ತು ಎನ್.ಆರ್. ರಮೇಶ್ ವಿರುದ್ಧ  ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೆ.ಜೆ ಜಾರ್ಜ್  ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ರವಿಕೃಷ್ಣಾ ರೆಡ್ಡಿ ಮತ್ತು ಎನ್.ಆರ್. ರಮೇಶ್ ವಿರುದ್ಧ ಮಾಜಿ ಸಚಿವ ಕೆ.ಜೆ ಜಾರ್ಜ್  ಖಾಸಗಿ ದೂರು ದಾಖಲಿಸಿದ್ದಾರೆ. ವೈಟ್ ಟಾಪಿಂಗ್ ವಿಚಾರದಲ್ಲಿ  ನನ್ನ ವಿರುದ್ದ ಆಧಾರ ರಹಿತ ಆರೋಪ ಮಾಡಿದ್ದಾರೆ. ಮಾನಹಾನಿಕರ ಹೇಳಿಕೆಗಳನ್ನ ನೀಡಿದ್ದಾರೆಂದು ಜಾರ್ಜ್ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ಕೆ.ಜೆ. ಜಾರ್ಜ್ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ.  ತಮ್ಮ ಮಗ ಮತ್ತು ಮಗಳ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ಧಾರೆ ಎಂದು ರವಿ ಕೃಷ್ಣ ರೆಡ್ಡಿ ಇಡಿಗೆ ದೂರು ಕೊಟ್ಟಿದ್ದು ಇದು ಆಧಾರ ರಹಿತ ಆರೋಪ ಎಂದು  ಜಾರ್ಜ್ ದೂರಿನಲ್ಲಿ ತಿಳಿಸಿದ್ದಾರೆ.

Key words: Ravi Krishna Reddy -N.R ramesh-Former minister- KJ George – filed -defamation case