ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲಿಸಿದ  ಸಚಿವ ಕೋಟಾ ಶ್ರೀನಿವಾಸ ಪೂಜಾರಿ…

Promotion

ಮೈಸೂರು. ಮಾರ್ಚ್,6,2021(www.justkannada.in)  ಇಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಖೆಯ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ನಗರದ ವಸಂತನಗರದಲ್ಲಿ ನಡೆಯುತ್ತಿರುವ ಹುಡುಗರ ವಸತಿ ನಿಲಯ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿದರು.jk

ಬಳಿಕ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 16 ವಸತಿ ನಿಲಯಗಳು ಇದ್ದು ಸರಸ್ವತಿಪುರಂ, ಬೋಗಾದಿ, ಶ್ರೀರಾಂಪುರ, ಗೋಕುಲಂ, ಕುವೆಂಪು ನಗರದ ಭಾಗಗಳಲ್ಲಿ, ಖಾಸಗಿ ಹಾಸ್ಟೆಲ್ ಗಳಲ್ಲಿ ನಡೆಯುತ್ತಿದ್ದು  ಈ ಹಾಸ್ಟೆಲ್ ಗಳಿಗೆ ಸುಮಾರು 19 ಲಕ್ಷ ರೂ ಗಳ ಬಾಡಿಗೆ ಸಂದಾಯವಾದರೆ ಸುಮಾರು ವರ್ಷಕ್ಕೆ 2.5ಕೋಟಿ ರೂಗಳು ಬೊಕ್ಕಸಕ್ಕೆ ನಷ್ಟವಾಗುತ್ತಿರುತ್ತದೆ. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಮೈಸೂರಿನ ಹೊರವಲಯ ವಸಂತ ನಗರದಲ್ಲಿ 4 ಕಟ್ಟಡಗಳು ನಿರ್ಮಾಣ ವಾಗುತ್ತಿದ್ದು,  ತಿಂಗಳಿಗೆ 5 ಲಕ್ಷದಂತೆ ವರ್ಷಕ್ಕೆ 60 ಲಕ್ಷ ಇಲಾಖೆಗೆ ಉಳಿತಾಯವಾಗುತ್ತದೆ, ಹಾಗೇಯೆ ಒಂದು ಕಟ್ಟಡದಲ್ಲಿ ಸುಮಾರು 120 ಮಕ್ಕಳು ವಸತಿಯನ್ನು ಪಡೆದರೆ  500 ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಮಾಡಬಹುದು ಎಂದರು.

ಕರ್ನಾಟಕ ಗೃಹ ಮಂಡಳಿ ಕಟ್ಟಡವನ್ನು ನಿರ್ಮಾಣ  ಕೆಲಸ ಮಾಡುತ್ತಿದ್ದು, ಕೆಲಸವನ್ನು ಶೀಘ್ರವೇ ಮುಗಿಸಬೇಕು. ಮುಂದಿನ ಜೂನ್ ತಿಂಗಳಲ್ಲಿ ಮುಕ್ತಾಯ ಮಾಡಿ ಬಡ ಹಿಂದುಳಿದ ವರ್ಗಗಳ ಯುವಕರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.Minister -Kota Srinivasa Poojary- - progress - construction -student –hostels-mysore

ಈ ಸಂಧರ್ಭದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಂದ್ಯಾ, ಕೆ.ಎಚ್.ಬಿ.ಯ ಸಹಾಯಕ ಕಾರ್ಯಪಾಲಕ ಅಭಿಯಂತರು ಜಗದೀಶ್, ತಾಲ್ಲೂಕು ಕಲ್ಯಾಣ ಅಧಿಕಾರಿ ಚಂದ್ರಕಲಾ, ವಿಸ್ತರಣಾಧಿಕಾರಿ ಸತೀಶ್, ಇಂಜಿನಿಯರ್ ಕೃಷ್ಣಾ, ಹಿಂದುಳಿದ ವರ್ಷಗಳ ಮೋರ್ಚಾ ಅಧ್ಯಕ್ಷರಾದ ಜೋಗಿಮಂಜು, ಗ್ರಾಮಾಂತರ ಅಧ್ಯಕ್ಷರಾದ ಪರಶುರಾಮಪ್ಪ,ಇದ್ದರು.

Key words: Minister -Kota Srinivasa Poojary- – progress – construction -student –hostels-mysore