ನಟಿ ರಮ್ಯಾಗೆ ತಲೆನೋವು ತಂದಿಟ್ಟ ಇನ್’ಸ್ಟಾಗ್ರಾಂ !

ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿರಮ್ಯಾಖಾತೆಈಗಹ್ಯಾಕ್ಆಗಿರುವ ಕುರಿತು ಅನುಮಾನವ್ಯಕ್ತಪಡಿಸಿದ್ದಾರೆ.

ರಮ್ಯಾ ಖಾತೆಯಲ್ಲಿ ಇದ್ದ ಫೋಟೋಗಳೆಲ್ಲವೂ ಡಿಲೀಟ್ ಆಗಿದೆ. ರಿಫ್ರೆಷ್ ಚಿಹ್ನೆಯಷ್ಟೇ ಬರುತ್ತಿದೆ. ಈ ಬಗ್ಗೆ ಸ್ಟೇಟಸ್ ನಲ್ಲಿ ಬರೆದುಕೊಂಡಿರುವ ರಮ್ಯಾ ನಿನ್ನೆ ಬೆಳಿಗ್ಗೆಯಿಂದ ಹೀಗೇ ಬರುತ್ತಿದೆ. ಅನ್ ಇನ್ ಸ್ಟಾಲ್ ಮಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಅವರ ಖಾತೆ ಹ್ಯಾಕ್ ಆಗಿರಬಹುದು ಎಂದು ಶಂಕಿಸಲಾಗಿದೆ.  ಅಂದಹಾಗೆ ಇತ್ತೀಚಿಗಷ್ಟ ಇನ್ ಸ್ಟಾಗ್ರಾಂಗೆ ರಮ್ಯಾ ಮರಳಿದ್ದರು.