‘ಡಾ.ವಿಠಲ್ ರಾವ್’ ಬರ್ತ್ ಡೇಗೆ ಕೇಕ್ ಮಾಡಿ ಕಳುಹಿಸಿದ ಕಿಚ್ಚ!

0
222

ಬೆಂಗಳೂರು, ಆಗಸ್ಟ್ 27, 2020 (www.justkannada.in): ಹಾಸ್ಯ ನಟ ರವಿಶಂಕರ್ ಗೌಡ ಬರ್ತಡೇ ಪ್ರಯುಕ್ತ ಕಿಚ್ಚ ಸುದೀಪ್ ವಿಶೇಷವಾದ ಕೇಕ್ ಕಳುಹಿಸಿದ್ದಾರೆ.

ಸದ್ಯ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿರುವ ಸುದೀಪ್, ಅಲ್ಲಿಂದಲೇ ಆತ್ಮೀಯ ಸ್ನೇಹಿತ ಹಾಗೂ ಆಪ್ತ ನಟನಿಗೆ ಕೇಕ್ ಕಳುಹಿಸಿಕೊಟ್ಟಿದ್ದಾರೆ.

ಸುದೀಪ್ ಕಳುಹಿಸಿದ ಕೇಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿಶಂಕರ್ ಗೌಡ ”ಸ್ನೇಹದ ಸಲುಗೆ ಎಷ್ಟೆ ಇದ್ದರು. ದೊಡ್ಡ ಗುಣವನ್ನು ಗೌರವಿಸಲೆಬೇಕು ಎಂದಿದ್ದಾರೆ.

ಕಿಚ್ಚನಿಂದ ಕುಚೇಲನ ಮನೆಗೆ ಸ್ನೇಹದ ಪ್ರತೀಕ. ಸಿಹಿ ಊರಣದ ಉಡುಗೊರೆ ರವಾನೆ. ಈ ಅಸೀಮ ಪ್ರೀತಿಗೆ ಧನ್ಯವಾದಗಳು ದೀಪು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.