ತಮ್ಮನ್ನಾ ಅಪ್ಪ, ಅಮ್ಮಗೂ ತಟ್ಟಿದ ಕೊರೊನಾ: ಆತಂಕದಲ್ಲಿ ಮಿಲ್ಕಿ ಬ್ಯೂಟಿ

ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ತಮ್ಮನ್ನಾ ಭಾಟಿಯಾ ಕುಟುಂಬಕ್ಕೂ ಕೊರೊನಾ ಕಂಟಕ ಎದುರಾಗಿದೆ.

ತಮನ್ನಾರ ಪೋಷಕರಾದ ಸಂತೋಷ್ ಭಾಟಿಯಾ ಹಾಗೂ ರಜನಿ ಭಾಟಿಯಾ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ.  ಈ ಕುರಿತು ಖುದ್ದು ತಮನ್ನಾ ಭಾಟಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಅಪ್ಪ, ಅಮ್ಮ ಇಬ್ಬರಿಗೂ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ, ಕೊವಿಡ್ 19 ಪರೀಕ್ಷೆ ಮಾಡಿಸಲಾಗಿತ್ತು. ಇಬ್ಬರ ರಿಪೋರ್ಟ್ ಕೂಡ ಪಾಸಿಟಿವ್ ಬಂದ ಕಾರಣ ತಮನ್ನಾ ಮತ್ತವರ ಕುಟುಂಬದವರೂ ಸೇರಿದಂತೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಟೆಸ್ಟ್ ಮಾಡಿಸಲಾಗಿದೆ. ಆದರೆ ಎಲ್ಲರ ರಿಪೋರ್ಟ್ ಕೂಡ ನೆಗಟಿವ್ ಬಂದಿದೆ.

Actress Tamanna Crying Images in Cameraman Ganga Tho Rambabu