ಬಿಜೆಪಿಯವರು ರಾಜ್ಯದ ಇಮೇಜ್ ಹಾಳು ಮಾಡಿದ್ದಾರೆ- ಎಂ.ಬಿ ಪಾಟೀಲ್ ವಾಗ್ದಾಳಿ.

ವಿಜಯಪುರ,ಸೆಪ್ಟಂಬರ್,12,2022(www.justkannada.in): 40 ಪರ್ಸೆಂಟ್ ಕಮೀಷನ್ ಆರೋಪ ಸಂಬಂಧ ಬಿಜೆಪಿಯವರು ರಾಜ್ಯದ ಇಮೇಜ್ ಅನ್ನೇ ಹಾಳು ಮಾಡಿದರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಬಿ ಪಾಟೀಲ್,  ರಾಜ್ಯದಲ್ಲಿರುವುದೇ ಕಮಿಷನ್ ಸರ್ಕಾರ.  ಗುತ್ತಿಗೆದಾರರ ಸಂಘಟನೆ ಕಮಿಷನ್ ಆರೋಪ ಮಾಡಿದೆ. ಬಿಬಿಎಂಪಿ ಗುತ್ತಿಗೆದಾರರು 50 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು. ಚುನಾವಣೆ ಹತ್ತರ ಬಂದಾಗ 70 ಪರ್ಸೆಂಟ್ ಆಗಬಹುದು . ಬಿಜೆಪಿಯವರು ರಾಜ್ಯದ ಇಮೇಜ್ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಬಗ್ಗೆ ಸಿಟಿ ರವಿ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಬಿಜೆಪಿಯವರ ಕೆಟ್ಟ ಸಂಸ್ಕೃತಿ ತೋರುತ್ತದೆ. ಸಿಟಿ ರವಿ ಕ್ಷಮೆ ಕೇಳಬೇಕು.  ಇಲ್ಲದಿದ್ದರೇ ಜನ ಪಾಠ ಕಲಿಸುತ್ತಾರೆ ಎಂದು ಎಂಬಿ ಪಾಟೀಲ್ ತಿರುಗೇಟು ನೀಡಿದರು.

ಜನಸ್ಪಂದನ ಕುರಿತು ಲೇವಡಿ ಮಾಡಿದ ಅವರು,  ಸಿಎಂ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ್ದಾರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ವಿಡಿಯೋ ನನ್ನ ಬಳಿ ಇದೆ ಎಂದು ವ್ಯಂಗ್ಯವಾಡಿದರು.

Key words: 40 percent-commission -BJP- MB Patil