ಒತ್ತಡಕ್ಕೆ ಮಣಿಯಲ್ಲ: ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ದರೂ ತೆರವು- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಸೆಪ್ಟಂಬರ್,12,2022(www.justkannada.in):   ರಾಜಕಾಲುವೆಯನ್ನ ಯಾರೇ ಒತ್ತುವರಿ ಮಾಡಿಕೊಂಡಿದರೂ ಸರಿ ತೆರವು ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಯಾವುದೇ ಒತ್ತಡಕ್ಕೆ ಮಣಿಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಯಾರೇ ಒತ್ತುವರಿ ಮಾಡಿದ್ರೂ ತೆರವು  ಮಾಡಲಾಗುತ್ತದೆ. ರಾಜಕಾಲುವೆ ಒತ್ತುವರಿ ಕಾರ್ಯಚರಣೆಯಿಂದ ಹಿಂದೆ ಸರಿಯಲ್ಲ.

ಅದಿಕ ಮಳೆಯಿಂದ ಎಲ್ಲರಿಗೂ ತೊಂದರೆಯಾಗಿದೆ.  ಒತ್ತುವರಿ ತೆರವು ಆರಂಭವಾಗಿದೆ ನಿಲ್ಲುವುದಿಲ್ಲ ಕೋರ್ಟ್ ಕೂಡ ಒತ್ತುವರಿ ತೆರವಿಗೆ ಈಗಾಗಲೇ ಆದೇಶೀಸಿದೆ. ಭಾರಿ ಮಳೆಯಿಂದ ಐಟಿ ಬಿಟಿಯವರಿಗೂ ತೊಂದರೆಯಾಗಿದೆ ರಸ್ತಯಲ್ಲಿ ಓಡಾಡುವವರು ಜನಸಾಮಾನ್ಯರಿಗೂ ತೊಂದರೆಯಾಗಿದೆ ಎಂದು ಸಿಂ ಬೊಮ್ಮಾಯಿ.

Key words: pressure- encroached –Rajkaluve- vacated- CM Basavaraja Bommai