ಇಂದು ಸಂಜೆ ಅಮಿತ್ ಶಾ ಭೇಟಿ ಮಾಡಿ ಗಡಿ ವಿವಾದದ ಬಗ್ಗೆ ನಮ್ಮ ನಿಲುವು ತಿಳಿಸುತ್ತೇನೆ- ಸಿಎಂ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,14,2022(www.justkannada.in): ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಮಹಾರಾಷ್ಟ್ರ –ಕರ್ನಾಟಕ ಗಡಿ ವಿವಾದದ ಬಗ್ಗೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ, ಸಂಜೆ 7ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆಯಲ್ಲಿ ಭಾಗಿಯಾಗುವೆ. ಗಡಿ ಸಂಬಂಧ ನಮ್ಮ ನಿಲುವನ್ನ ಅಮಿತ್ ಶಾಗೆ ತಿಳಿಸುತ್ತೇವೆ. ಅವಕಾಶ ಸಿಕ್ಕರೇ ಸಚಿವ ಸಂಪುಟದ ಬಗ್ಗೆಯೂ ಪ್ರಸ್ತಾಪಿಸುವೆ ಎಂದರು.

6 ದಶಕಗಳಿಂದ ಗಡಿ ವಿಚಾರವನ್ನ ಮಹಾರಾಷ್ಟ್ರ ರಾಜಕೀಯಕ್ಕೆ ಬಳಸುತ್ತಿದೆ.  ನಾವು ಹಾಗಲ್ಲ ನಮಗೆ ನೆಲ ಜಲ ಮುಖ್ಯ ಎಂದರು.

ಒಳಮೀಸಲಾತಿ ಉಪಸಮಿತಿ ರಚನೆ ಕಣ್ಣೊರೆಸುವ ತಂತ್ರ ಎಂದ ವಿಪಕ್ಷ ನಾಯಕ ಸಿದ‍್ಧರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯಗೆ 5 ವರ್ಷ ವರದಿ ನೋಡುವ ಧೈರ್ಯ ಇರಲಿಲ್ಲ ದೀಪ ಹಚ್ಚಿ ಮಾತಾಡಿ ಬಂದವರ ಬಗ್ಗೆ ನಾನು ಮಾತನಾಡಲ್ಲ. ನಾವು ಪ್ರಮುಖ ವಿಚಾರಗಳಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಂದು ನೋಡಿಕೊಳ್ಳಿ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.

Key words: meet -Amit Shah – convey -our stand – border –dispute-CM Bommai.