ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ: ಮಹಿಳಾ ಇನ್ಸ್ ಪೆಕ್ಟರ್ ಸಸ್ಪೆಂಡ್.

ಬೆಂಗಳೂರು,ಮೇ,9,2023(www.justkannada.in):  ಮತಗಟ್ಟೆ ತರಬೇತಿ ವೇಳೆ ಉದ್ಧಟತನ ಆರೋಪದ ಮೇಲೆ ಮಹಿಳಾ ಇನ್ಸ್ ​​ಪೆಕ್ಟರ್ ರೊಬ್ಬರನ್ನ​​ ಅಮಾನತು ಮಾಡಲಾಗಿದೆ.

ಭವ್ಯಾ ಅಮಾನತುಗೊಳಗಾದ ಮಹಿಳಾ ಇನ್ಸ್​​ಪೆಕ್ಟರ್​. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಮಲ್ಲತ್ತಹಳ್ಳಿ ಅಂಬೇಡ್ಕರ್​ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಇನ್ಸ್​ ಪೆಕ್ಟರ್ ಭವ್ಯ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ.

ನೀವು ಹೇಳಿದಂತೆ ಕೇಳುವುದಕ್ಕೆ ನಾನು ನಿಮ್ಮ ಡಿಪಾರ್ಟ್ಮೆಂಟ್ ಅಲ್ಲ. ಈ ತರಬೇತಿಯಿಂದ ಯಾವುದೇ  ಉಪಯೋಗವಿಲ್ಲ. ಯಾರಿಗಾದರೂ ಹೇಳಿಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನ  ಬಿಬಿಎಂಪಿ ಆಯುಕ್ತರಿಗೆ ಅಧಿಕಾರಿಗಳು ವಿಷಯ ತಿಳಿಸಿದ್ದಾರೆ. ಈ ಹಿನ್ನಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಇನ್ಸ್ ಪೆಕ್ಟರ್ ಭವ್ಯಾರನ್ನ ಜಿಲ್ಲಾ ಚುನಾವಣಾ ಅಧಿಕಾರಿ  ಅಮಾನತುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: polling booth –training- Woman inspector -suspended.