ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ.

ಇಸ್ಲಾಮಾಬಾದ್,ಮೇ,9,2023(www.justkannada.in):  ಭ್ರಷ್ಟಾಚಾರದ ಆರೋಪದಡಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇಮ್ರಾನ್ ​ಖಾನ್​ ರನ್ನು ಇಸ್ಲಾಮಾಬಾದ್ ಹೈಕೋರ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಇಮ್ರಾನ್‌ ಖಾನ್‌ರನ್ನು ಬಂಧಿಸಲಾಗಿದೆ.

ರಾಜಧಾನಿಯ ನ್ಯಾಯಾಲಯಕ್ಕೆ ಸೇರಿದ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯವು ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿತ್ತು. ಇದಕ್ಕೂ ಹಿಂದಿನ ದಿನ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಮ್ ಅವರು ಮೂರು ಪುಟಗಳ ಕಾಯ್ದಿರಿಸಿದ ತೀರ್ಪನ್ನು ಬಿಡುಗಡೆ ಮಾಡಿದ್ದರು. ಕೋರ್ಟ್‌ಗೆ ಇಮ್ರಾನ್‌ ಖಾನ್‌ ಪದೇಪದೇ ಹಾಜರಾಗದೆ ಇರುವ ಕಾರಣ ಜಾಮೀನುರಹಿತ ವಾರಂಟ್‌ ಅನ್ನು ಅವರು ಹೊರಡಿಸಿದ್ದರು.

Key words: Pakistan- Former Prime Minister -Imran Khan -arrested.