ಕೋವಿಡ್ ಸ್ವಯಂ ಸೇವಕರಿಗೆ ಕೆಪಿಸಿಸಿ ಆರೋಗ್ಯ ಹಸ್ತ ತರಬೇತಿ ಶಿಬಿರ: ಮಾಜಿ ಸಂಸದ ಧೃವ ನಾರಾಯಣ್ ಭಾಗಿ…

ಮೈಸೂರು,ಆಗಸ್ಟ್28,2020(www.justkannada.in): ಕೋವಿಡ್ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ  ಸ್ವಯಂ ಸೇವಕರಿಗೆ ಮೈಸೂರಿನಲ್ಲಿ ಕೆಪಿಸಿಸಿ ವತಿಯಿಂದ ವಿಶೇಷ ತರಬೇತಿ ಶಿಬಿರ  ಆಯೋಜನೆ ಮಾಡಲಾಗಿತ್ತು.jk-logo-justkannada-logo

ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಆರೋಗ್ಯ ಹಸ್ತ ತರಬೇತಿ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಮಾಜಿ ಸಂಸದ ಧೃವ ನಾರಾಯಣ್ ರಿಂದ ಚಾಲನೆ ನೀಡಿದರು. ವರುಣ ಕ್ಷೇತ್ರದ ಶಾಸಕ ಯತಿಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು.kpcc-health-training-program-covid-volunteering-former-mp-dhruva-narayan-mysore

ಕೋವಿಡ್ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸ್ವಯಂ ಸೇವಕರಿಗೆ ಕೆಪಿಸಿಸಿ ವತಿಯಿಂದ ಈ ವಿಶೇಷ ತರಬೇತಿ ಶಿಬಿರ ನಡೆಸಲಾಯಿತು. ಸಭೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರ ಮತ್ತು ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸ್ವಯಂ ಸೇವಕರು ಭಾಗಿಯಾಗಿದ್ದರು. ಸಭೆಯಲ್ಲಿ ಸಾಂಕೇತಿಕವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ ಬಿ.ಜೆ  ವಿಜಯ್ ಕುಮಾರ್ ಸೇರಿದಂತೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಇನ್ನು ಕೆಪಿಸಿಸಿ ವತಿಯಿಂದ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ಥಳೀಯ ಬೂತ್ ಮಟ್ಟಗಳಲ್ಲಿ ತರಬೇತಿ ಸಭೆ ಆಯೋಜಿಸಲು ನಿರ್ಧಾರ ಮಾಡಲಾಗಿದೆ.

Key words: KPCC -Health – Training- Program – covid- Volunteering-Former MP- Dhruva Narayan –mysore