ಮೇಯರ್,  ಉಪಮೇಯರ್ ಮೀಸಲು ಪ್ರಕಟ: ನಾಡಹಬ್ಬ ಮೈಸೂರು ದಸರಾಗೆ ಹೊಸ ‌ಮೇಯರ್..!

ಮೈಸೂರು,ಆಗಸ್ಟ್,24,2022(www.justkannada.in):   ರಾಜ್ಯದ 10 ನಗರ ಪಾಲಿಕೆಗಳ ಮೇಯರ್,  ಉಪಮೇಯರ್ ಸ್ಥಾನಕ್ಕೆ  ಮೀಸಲು ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಹಿಂದುಳಿದ‌ ವರ್ಗಗಳ‌ ಮಹಿಳೆಗೆ ಮೀಸಲಿರಿಸಲಾಗಿದೆ. ಮೀಸಲು ಪ್ರಕಟಿಸಿ ಟಿ.ಮಂಜುನಾಥ್ ಅವರು  ಪ್ರಕಟಣೆ ಹೊರಡಿಸಿದ್ದಾರೆ.

ಕಳೆದ 5 ತಿಂಗಳಿಂದ ಮೀಸಲು ಪ್ರಕಟವಾಗಿರಲಿಲ್ಲ.  ಮೈಸೂರು ಹಾಲಿ ಮೇಯರ್ ಸುನಂದಾ ಪಾಲನೇತ್ರ ಅವಧಿ ಮುಗಿದು 5 ತಿಂಗಳು ಕಳೆದಿತ್ತು. ಹೀಗಾಗಿ ಹಂಗಾಮಿ‌ ಮೇಯರ್ ಆಗಿ ಮುಂದುರಿದಿದ್ದರು. ಜೆಡಿಎಸ್- ಬಿಜೆಪಿ ಮೈತ್ರಿಯಿಂದ‌ ಮೇಯರ್ ಆಗಿದ್ದರು.

ಸುನಂದಾ ಪಾಲನೇತ್ರ, ಮಾಜಿ ಸಿಎಂ‌ ಬಿಎಸ್ ವೈ ಅವರ ದೂರದ ಸಂಬಂಧಿಯಾಗಿದ್ದಾರೆ. ಇದೀಗ  ಮೇಯರ್ ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು,  ನಾಡಹಬ್ಬ ಮೈಸೂರು ದಸರಾ ವೇಳೆಗೆ ಹೊಸ‌ಮೇಯರ್ ಆಗಮನವಾಗುವ ಸಾಧ್ಯತೆ ಇದೆ.

Key words: Mayor- Deputy -Mayor –reservetion- Mysore