ಮೊದಲು ನಿಮ್ಮ ಪಕ್ಷದ ನಾಯಕರನ್ನ ಹಿಡಿದಿಟ್ಟುಕೊಳ್ಳಿ- ಹೆಚ್ ಡಿಕೆ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯ…

ಮೈಸೂರು,ಮಾರ್ಚ್,23,2021(www.justkannada.in):  ಶಾಸಕ ತನ್ವೀರ್ ಸೆಠ್ ಜೆಡಿಎಸ್ ಗೆ ಬಂದರೆ ಸ್ವಾಗತ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮೊದಲು ನಿಮ್ಮ ಪಕ್ಷದ ನಾಯಕರನ್ನು ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮೊದಲು ನಿಮ್ಮ ಪಕ್ಷದ ನಾಯಕರನ್ನ ಹಿಡಿದಿಟ್ಟುಕೊಳ್ಳಿ. ಅವರೆ ಕಿತ್ಕೊಂಡು ಬೇರೆ ಪಕ್ಷಕ್ಕೆ ಹೊಗ್ತಾ ಇದಾರೆ. ಕಾಂಗ್ರೆಸ್ ಪಕ್ಷದ ಎಂಎಲ್ ಎಗಳ ಉಸಾಬರಿ ನಿಮಗೇಕೆ ಎಂದು ಕಿಡಿಕಾರಿದರು.

 ತನ್ವೀರ್ ಸೇಠ್ ಬಂದ್ರೆ ಸಿಎಂ ಮಾಡ್ತೀರಾ…?

ಶಾಸಕ ತನ್ವೀರ್ ಸೇಠ್ ಬಂದ್ರೆ ಸಿಎಂ ಮಾಡ್ತೀರಾ. ಹಾಗಂತ ಘೋಷಣೆ ಮಾಡಿ ನೋಡೋಣಾ..? ಸಿಎಂ ಮಾತ್ರ ನಿಮ್ಮ ಕುಟುಂಬದವರೇ ಆಗಬೇಕು. ತನ್ವಿರ್ ಸೇಠ್ ರನ್ನ ಜಾತಿ ಕೆಡಿಸುವಂತ ಕೆಲಸ ಯಾಕ್ ಮಾಡ್ತೀರಿ. ತನ್ವೀರ್ ಸೇಠ್ ಎಲ್ಲೂ ಹೋಗಲ್ಲ. ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದಿರೋರು ಕಾಂಗ್ರೆಸ್ ನಲ್ಲೆ ಇರುತ್ತಾರೆ ಎಂದು ಎಂ. ಲಕ್ಷ್ಮಣ್ ಹೇಳಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಎಫ್.ಐ.ಆರ್ ದಾಖಲಿಸದಿರುವುದಕ್ಕೆ ಆಕ್ಷೇಪ…

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಮೇಶ್ ಜಾರಕಿಹೊಳಿ ವಿರುದ್ಧ ಎಫ್.ಐ.ಆರ್ ದಾಖಲಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮಾರ್ಚ್ 2013ರಲ್ಲಿ ಜಾರಿಗೆ ಬಂದಿರುವ ನಿರ್ಭಯ ಕಾಯಿದೆ ಪ್ರಕಾರ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಕೇಸ್ ದಾಖಲಿಸಬೇಕಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ. ಆದರೆ ಪ್ರಭಾವಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿಯವರ ವಿಚಾರದಲ್ಲಿ ಎಫ್.ಐ.ಆರ್ ದಾಖಲಾಗದಿರುವುದು ರಾಜ್ಯದ ಜನರಲ್ಲಿ ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಸಂತ್ರಸ್ಥ ಯುವತಿಯ ವಿಡಿಯೋ ಆಡಿಯೋಗಳು ಪೊಲೀಸರಿಗೆ ಸಿಕ್ಕಿದ್ದರೂ ಅಪರಾಧಿ ಸ್ಥಾನದಲ್ಲಿರುವ ರಮೇಶ್ ಜಾರಿಕಿಹೊಳಿಯವರನ್ನೇ ಸಂತ್ರಸ್ಥರೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.your party -leaders – kpcc spokesperson- M. Laxman –irony-HD kumaraswamy

ಸಂತ್ರಸ್ಥ ಮಹಿಳೆಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದರೂ ಆಕೆಯನ್ನು ಹುಡುಕಿ ರಕ್ಷಣೆ ನೀಡಲಾಗಿಲ್ಲ. ತನಿಖೆಯ ದಿಕ್ಕನ್ನು ತಪ್ಪಿಸುತ್ತಿರುವ ರಮೇಶ್ ಜಾರಕಿಹೊಳಿಯವರನ್ನು ಕಾಪಾಡಬೇಕೆಂಬ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ನಡೆಸಬೇಕು ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

Key words: your party -leaders – kpcc spokesperson- M. Laxman –irony-HD kumaraswamy