Monday, September 14, 2026

BDA Apartments

Home Cinema ನಿಖಿಲ್ ಕಲ್ಯಾಣಕ್ಕೂ ಕೊರೊನಾ ಭೀತಿ ! ಮದುವೆ ಜಾಗ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ

ನಿಖಿಲ್ ಕಲ್ಯಾಣಕ್ಕೂ ಕೊರೊನಾ ಭೀತಿ ! ಮದುವೆ ಜಾಗ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ

ಬೆಂಗಳೂರು, ಮಾರ್ಚ್ 11, 2020 (www.juskannada.in):ನಿಖಿಲ್ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಹೆಚ್ಡಿಕೆ ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ.

ಕೊರೊನಾ ಎಫೆಕ್ಟ್ ಹಿನ್ನೆಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಆಯೋಜಿಸಿದ್ದ ಮದುವೆಯನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮನಗರದ ಸುಮಾರು 60 ಎಕರೆ ಜಮೀನಿನಲ್ಲಿ ಈಗಾಗಲೇ ಸಿದ್ಧತೆ ನಡೆದಿತ್ತು. ಜಾನಪದ ಲೋಕದ ಜಮೀನಿನಲ್ಲಿ ಈಗಾಗಲೇ 6 ಕೊಳವೆಬಾವಿ ಕೊರೆಸಲಾಗಿತ್ತು ಆದರೆ ಕೊರೊನಾ ಭೀತಿಯಿಂದ ಸ್ಥಳ ಬದಲಾವಣೆ ಮಾಡುವ ಸಂಭವ ಇದೆ.

ದೇವೆಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರಂತೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೆ ಹೊರಬೀಳಬೇಕಿದೆ. ಈಗ ಅಚಾನಕ್ಕಾಗಿ ಸ್ಥಳ ಬದಲಾವಣೆ ನಿರ್ಣಯ ಕೈಗೊಂಡಿದೆ ಕುಟುಂಬ.