ಭಾರತದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 19,906 ಕೇಸ್ !

ನವದೆಹಲಿ, ಜೂನ್ 28, 2020 (www.justkannada.in): ಭಾರತದಲ್ಲಿ ಒಂದೇ ದಿನ 19,906 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,28,859ಕ್ಕೆ ಏರಿಕೆಯಾಗಿದೆ. 16,095 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 19,906 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, 410 ಜನರು ಮೃತಪಟ್ಟಿದ್ದಾರೆ. ಇದು ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಕರಣಗಳಾಗಿವೆ.

ಇದೇ ಮೊದಲ ಬಾರಿಗೆ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಒಂದೇ ದಿನದಲ್ಲಿ 19 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವದಲ್ಲಿ ಕೊರೊನಾ ವೈರಸ್ ಹೆಚ್ಚು ಇರುವ ಪಟ್ಟಿಯಲ್ಲಿ ದೇಶ 4ನೇ ಸ್ಥಾನದಲ್ಲಿದೆ.

ಅಮೆರಿಕಾ, ಬ್ರೆಜಿಲ್, ರಷ್ಯಾ ಟಾಪ್ 3 ಸ್ಥಾನದಲ್ಲಿದೆ. ಒಟ್ಟು 5,28,859 ಪ್ರಕರಣಗಳು ಭಾರತದಲ್ಲಿ ದಾಖಲಾಗಿದ್ದು, ದೇಶ 4ನೇ ಸ್ಥಾನದಲ್ಲಿದೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 16,095.