ರಾಜ್ಯ ಶಾಂತಿಯುತ: ಕೋಮುಗಲಭೆಗೆ ಅವಕಾಶ ಇಲ್ಲ-ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ  ಅಬ್ದುಲ್ ಅಜೀಂ.

ಮೈಸೂರು,ಆಗಸ್ಟ್,24,2022(www.justkannada.in): ರಾಜ್ಯ ಶಾಂತಿಯುತವಾಗಿದೆ. ಯಾವುದೇ ಕೋಮುಗಲಭೆಗೆ ಅವಕಾಶ ಇಲ್ಲ ಎಂದು ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ  ಅಬ್ದುಲ್ ಅಜೀಂ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ  ಅಬ್ದುಲ್ ಅಜೀಂ ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು. ಸಭೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಸ್ಟ್ ಜೈನ್ಸ್  ಸಮುದಾಯದ ಹಲವು ಮುಖಂಡರು ಭಾಗಿಯಾಗಿದ್ದರು.

ಅಲ್ಪ ಸಂಖ್ಯಾತರ ಆಸ್ತಿ ಪಾಸ್ತಿಗಳು ಬಹುಸಂಖ್ಯಾತರ ಪಾಲಾಗಿವೆ. ಅವುಗಳ ಕಾನೂನಿನಾತ್ಮಕ ತನಿಖೆ ಆಗಬೇಕು. ನಮಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಸಭೆಯಲ್ಲಿ ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ ಮಾಡಿದರು. ಅಲ್ಪಸಂಖ್ಯಾತರ ಸಾಮಾಜಿಕ ಭದ್ರತೆ, ಆರ್ಥಿಕ ಸವಲತ್ತು, ರಾಜಕೀಯ ಸ್ಥಾನಮಾನಗಳ ಕುರಿತು ಚರ್ಚೆಯಾಯಿತು.

ರಾಜ್ಯದಲ್ಲಿ ಕೋಮು ಸೌಹಾರ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಬ್ದುಲ್ ಅಜೀಂ, ರಾಜ್ಯ ಶಾಂತಿಯುತವಾಗಿದೆ. ಕೆಲವೆಡೆ ಸಣ್ಣ ಪುಟ್ಟ ಘಟ‌ನೆಗಳು ನಡೆಯಬಹುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಸೌಹಾರ್ದಕ್ಕೆ ಹೆಸರುವಾಸಿಯಾದ ರಾಜ್ಯ. ರಾಜ್ಯದಲ್ಲಿ ಅಲ್ಪ ಸಂಖ್ಯಾತರು ಹಾಗೂ ಇತರ ಎಲ್ಲಾ ಸಮುದಾಯಗಳು ಸಹೋದರತ್ವದ ಭಾವನೆಯಿಂದ ಜೀವ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೋಮುಗಲಬೆಗೆ ಯಾವುದೇ ರೀತಿಯ ಅವಕಾಶ ಇರುವುದಿಲ್ಲ ಎಂದರು.

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಫ್ರೌಡ ಹಾಗೂ ಉನ್ನತ ಶಿಕ್ಷಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಎಲ್ಲಾ ಸವಲತ್ತು ಸಮರ್ಪಕವಾಗಿ ಸಿಗುತ್ತಿದೆ. ಇದನ್ನು ಈ ಸಮುದಾಯದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಲುಬೇಕು  ರಾಜ್ಯದಲ್ಲಿ ನಡೆವ ಕೋಮು ಸಂಘರ್ಷ, ಆಹಾರ ಪದ್ದತಿ ವಿಚಾರ ಅನವಶ್ಯಕ ಚರ್ಚೆ.ಈ ಕುರಿತು ಇಂದು ಪೋಲಿಸರೊಂದಿಗೆ ಸಭೆ ನಡೆಸುತ್ತೇನೆ. ನಾನು ಒಬ್ಬ ಪೋಲಿಸ್ ಅಧಿಕಾರಿಯಾಗಿದ್ದವನು. ನನ್ನ ಅನುಭವದ ಮೂಲಕ ಪೋಲಿಸರಿಗೆ ಒಂದಷ್ಟು ಸಲಹೆ ಸೂಚನೆ ಕೊಡುತ್ತೇನೆ ಎಂದು ಅಬ್ದುಲ್ ಅಜೀಂ ಹೇಳಿದರು.

Key words: peaceful- No – communal -riots:-Minorities -Commission -Chairman -Abdul Azim