ಆಕ್ಸಿಜನ್ ದುರಂತ ಕೇಸ್: ಚಾಮರಾಜನಗರಕ್ಕೆ ಸಿಎಂ ಬಿಎಸ್ ವೈ ಭೇಟಿ ನೀಡದ ವಿಚಾರಕ್ಕೆ ಡಿ.ಕೆ ಶಿವಕುಮಾರ್ ಟಾಂಗ್.

ಚಾಮರಾಜನಗರ,ಜೂನ್,27,2021(www.justkannada.in): ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಮಂದಿ ರೋಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರಕ್ಕೆ ಭೇಟಿ ನೀಡದಿರುವ   ಸಿಎಂ ಬಿಎಸ್ ವೈಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.jk

ಸಿಎಂ ಬಿ.ಎಸ್ ಯಡಿಯೂರಪ್ಪಗೆ ಜನ ಹೊಡೆಯುತ್ತಾರೆ ಎಂಬ ಭಯ ಇದೆ. ಹೀಗಾಗಿ ಚಾಮರಾಜನಗರಕ್ಕೆ ಬರುವ ಧೈರ್ಯವನ್ನ ಮಾಡುತ್ತಿಲ್ಲ.  ಗುಪ್ತಚರ ಇಲಾಖೆ ಅವರಿಗೆ ಮಾಹಿತಿ ನೀಡಿದೆ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದಾಗ ಜನ ಬೈಯುತ್ತಾರೆ. ಆದರೆ ಅದನ್ನ ಸ್ವೀಕರಿಸಬೇಕು. ಆದರೆ ಅದನ್ನ ಸಿಎಂ ಬಿಎಸ್ ವೈ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

ಆಕ್ಸಿಜನ್ ದುರಂತದಿಂದ ಮೃತಪಟ್ಟವರ ಕುಟುಂಬಕ್ಕೆ ಇಂದು ಡಿ.ಕೆ ಶಿವಕುಮಾರ್  ತಲಾ 1 ಲಕ್ಷ ರೂ. ಪರಿಹಾರ ವಿತರಿಸಿದರು.  ನಂತರ ಮಾತನಾಡಿದ ಅವರು, ಇದು ಸರ್ಕಾರವೇ ಮಾಡಿದ ಕೊಲೆ. ಆಕ್ಸಿಜನ್ ಸಿಗದೆ ಸಾವೆಂದು ನ್ಯಾಯಾಲಯ ಹೇಳಿದೆ. ಇಷ್ಟಾದರೂ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದುರಂತದಲ್ಲಿ ಮೃಪಟ್ಟವರ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ ಪರಿಹಾರ ನೀಡಿದೆ. ಆದರೆ ನಾನು 1 ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ ಎಲ್ಲರ ಮನೆಗೂ ಹೋಗೋದು ಬೇಡ. ಚಾಮರಾಜನಗರಕ್ಕೆ ಬಂದು ಸಾಂತ್ವನ ಹೇಳುವ ಕೆಲಸ ಮಾಡಲಿ. ಈ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: kpcc-president- DK Shivakumar- Tong -CM BS yeddyurappa-not- visit – Chamarajanagar