ಕಣ್ಮನ ಸೆಳೆಯುವಂತೆ ಸಿಂಗಾರಗೊಳ್ಳುತ್ತಿರುವ ಸಂಪ್ರದಾಯಿಕ ಮತಗಟ್ಟೆಗಳು.

ಮೈಸೂರು,ಏಪ್ರಿಲ್,28,2023(www.justkannada.in): ಪ್ರಜಾಪ್ರಭುತ್ವದಲ್ಲಿ ಮತದಾರರರೇ ಪ್ರಭುಗಳು, ಈ ಮತದಾರರ ಪ್ರಭುಗಳು ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ಅವರಿಗೆ ಅಗತ್ಯ ಅರಿವು ಮತ್ತು ಮತದಾನದ ಮಹತ್ವ ಕುರಿತು ತಿಳಿಸಲು , ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ( ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅದರಂತೆ ಮೈಸೂರು ಜಿಲ್ಲೆ  ಹೆಚ್. ಡಿ. ಕೋಟೆ, ಬಸವನಗಿರಿ ಹಾಡಿಯ ಸರ್ಕಾರಿ ಬುಡಗಟ್ಟು ಆಶ್ರಮ ಶಾಲೆಯಲ್ಲಿ ನಿರ್ಮಾಣವಾಗಿರುವ ಮತಗಟ್ಟೆ ಸಂಖ್ಯೆ 57 ಕಣ್ಮನ ಸೆಳೆಯುವಂತೆ ಸಂಪ್ರದಾಯಿಕವಾಗಿ ಸಿಂಗಾರಗೊಳ್ಳುತ್ತಿದ್ದು, ಮತದಾರರನ್ನು ಮತದಾನ ಕೇಂದ್ರಗಳತ್ತ ಆಕರ್ಷಿಸುತ್ತಿವೆ.

ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಮತದಾನದ ದಿನದಂದು ಮತಗಟ್ಟೆಗಳನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಮೈಸೂರು ಜಿಲ್ಲಾ ಸ್ವೀಪ್ ಸಮಿತಿಯು ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಪ್ರಯುಕ್ತ ಬಸವನಹಾಡಿಯಲ್ಲಿ ನಿರ್ಮಾಣ ಮಾಡಿರುವ ಮತಗಟ್ಟೆಯು ಬುಡಕಟ್ಟು ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ವೈಭವವನ್ನು ಬಿಂಬಿಸುವ ಮೂಲಕ ಅತ್ಯಂತ ಆಕರ್ಷಕವಾಗಿ ಸಿಂಗಾರಗೊಂಡಿದೆ.

– V.Mahesh kumar

Key words: Traditional -polling booths – decorated –HD Kote