ನಾಯಕತ್ವ ಬದಲಾವಣೆ ವಿಚಾರ: ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜೂನ್,27,2021(www.justkannada.in): ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಪರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬ್ಯಾಟ್ ಬೀಸಿದ್ದಾರೆ.jk

ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಕೊರೋನಾ ಸಮಯದಲ್ಲಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇನ್ನು ಹೆಚ್ಚು ಆ್ಯಕ್ಟಿವ್ ಆಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸದ್ಯ 2 ಡೆಲ್ಟಾ ಪ್ಲಸ್ ಪ್ರಕರಣಗಳಿವೆ. ಡೆಲ್ಟಾ ಪ್ಲಸ್ ಪ್ರಕರಣಗಳ ಬಗ್ಗೆ ಆತಂಕ ಬೇಡ.ಡೆಲ್ಟಾಪ್ಲಸ್ ತಡೆಯಲು ಲಸಿಕೆಯೊಂದೇ ದಾರಿ. ಇನ್ನು ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ಇಡಲಾಗುತ್ತಿದೆ ಎಂದರು.

ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿಗೆ ರೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಈಗಲ್ಲ ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ರೇಸ್ ಇದೆ. ಕಾಂಗ್ರೆಸ್ ದಲಿತಪರ, ಅಲ್ಪಸಂಖ್ಯಾತಪರ ಅಂತಾರೆ. ಅದು ಕೇವಲ ವೋಟ್ ಬ್ಯಾಂಕ್ ಅಷ್ಟೆ. ಕಾಂಗ್ರೆಸ್ ಯಾವ ದಲಿತರನ್ನ ಸಿಎಂ ಮಾಡಿದೆ. ಅವರು ಇಲ್ಲಿವರೆಗೆ ಯಾರನ್ನ ಉದ್ಧಾರ ಮಾಡಿದ್ದಾರೆ ಎಂದು ಟೀಕಿಸಿದರು.

Key words: Leadership -Change –Issues- minister- Dr K Sudhakar- batting -CM BS Yeddyurappa