ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ: ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನ ವಶಕ್ಕೆ.

ಮೈಸೂರು,ಜುಲೈ,5,2022(www.justkannada.in): ಮೈಸೂರು ನಗರದ ಕೃಷ್ಣರಾಜ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ದ್ವಿಚಕ್ರವಾಹನ ಕಳ್ಳರನ್ನ ಬಂಧಿಸಿ ಸುಮಾರು ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ ರೂ. 5,00,000 ರೂ. ಮೌಲ್ಯದ ವಿವಿಧ ಮಾದರಿಯ 09 ದ್ವಿ ಚಕ್ರ ವಾಹನಗಳನ್ನು  ವಶಕ್ಕೆ ಪಡೆದಿದ್ದಾರೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣೆಯ- 1. ನಜರ್‌ ಬಾದ್-6 ದೇವರಾಜ – 1, ಲಷ್ಕರ್ ಠಾಣೆಯ – 1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರು ನಗರದ ಡಿ.ಸಿ.ಪಿ ಗೀತ, ಎಂ.ಎಸ್. ಹಾಗೂ ಕೃಷ್ಣರಾಜ ವಿಭಾಗದ ಎ.ಸಿ.ಪಿ ಗಂಗಾಧರಸ್ವಾಮಿ, ಎಸ್.ಇ. ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ಎನ್.ವಿ.ಮಹೇಶ್, ಪಿ.ಎಸ್.ಐಗಳಾದ ಮಂಜು ಸಿ.ಆರ್ (ಅಪರಾಧ),. ಮಹಾವೀರ್(ಕಾ&ಸು) ಎ.ಎಸ್.ಐ ಚಂದ್ರನಾಯಕ್‌ ಹಾಗೂ ಸಿಬ್ಬಂದಿಗಳಾದ ಮೊಖದ್ದರ್ ಷರೀಪ್, ಸಂದೇಶ್ ಕುಮಾರ್, ಸಿದ್ದರಾಮ ಪೂಜಾರಿ, ಮಧು, ಶ್ರೀನಿವಾಸ್ ಪ್ರಸಾದ್ ಈ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

Key words: Two- bike-thieves- arrested-mysore