JK EXCLUSIVE : ಅಂದು ಒಡೆಯರ್, ಇಂದು ಮೋದಿ : ಮೊದಲ ಘಟಿಕೋತ್ಸವ ನಡೆದ ದಿನದಂದೇ ಮೈಸೂರು ವಿವಿ ನೂರನೇ ಘಟಿಕೋತ್ಸವ..!

 

ಮೈಸೂರು, ಅ.17, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮೊದಲನೇ ಘಟಿಕೋತ್ಸವ ಸಮಾರಂಭ ಯಾವ ದಿನದಲ್ಲಿ ನಡೆದಿತ್ತೋ ಅದೇ ದಿನದಲ್ಲಿ ಈಗ 100 ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿರುವುದು ವಿಶೇಷ.

ನಿಜಕ್ಕೂ ಇದೊಂದು ಕಾಕತಾಳಿಯ ಘಟನೆ. ಮೈಸೂರು ವಿವಿಯ ಪ್ರಥಮ ಘಟಿಕೋತ್ಸವ ಸಮಾರಂಭ 1918 ರ ಅಕ್ಟೊಬರ್ 19 ರಂದು ನಡೆದಿತ್ತು. ಆಗ ಈ ಘಟಿಕೋತ್ಸವದಲ್ಲಿ ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರು ಘಟಿಕೋತ್ಸವ ಭಾಷಣ ಮಾಡಿದ್ದರು. ಮೈಸೂರು ದಿನಾನರಾಗಿದ್ದ ಸರ್.ಎಂ.ವಿಶ್ವೇಶ್ವರ್ಯ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಘಟನೆ ವಿ.ಜಿ.ತಳವಾರ್ ಹಾಗೂ ಬಿ.ಎಸ್.ಕಿರಣಗಿ ಸಂಪಾದಕತ್ವದ ‘ ಲೆಗಸ್ಸಿ ಆಫ್ ಲರ್ನಿಂಗ್ ‘ (Legacy of Learning ) ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಮೈಸೂರು ವಿಶ್ವವಿದ್ಯಾನಿಲಯದ ನೂರನೇ ಘಟಿಕೋತ್ಸವ ಸಮಾರಂಭ ಸಹ 2020 ರ ಅಕ್ಟೊಬರ್ 19 ರಂದೇ ನಡೆಯುತ್ತಿರುವುದು ವಿಶೇಷ.

Mysore-university-centenary-convocation-prime.minister-narendra.modi-co-incident-digital-virtual-address

ಈ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ‘ಜಸ್ಟ್ ಕನ್ನಡ ‘ ಸಂಪರ್ಕಿಸಿದಾಗ ಅವರು ಹೇಳಿದಿಷ್ಟು..
ನಿಜಕ್ಕೂ ಇದೊಂದು ಕಾಕತಾಳಿಯ ಘಟನೆ. ಈ ವರ್ಷದ ಮಾರ್ಚ್ ನಲ್ಲೇ 100 ನೇ ಘಟಿಕೋತ್ಸವ ಸಮಾರಂಭ ನಡೆಸಲು ಸಿದ್ಧತೆ ನಡೆಸಿದ್ದೆವು. ಆದರೆ ಪೆಂಡಮಿಕ್ ಕಾರಣ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಅನಿವಾರ್ಯವಾಗಿ ಮುಂದೂಡಬೇಕಾಯಿತು. ಕಡೆಗೆ ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಘಟಿಕೋತ್ಸವ ಸಮಾರಂಭಕ್ಕೆ ಪುನರ್ ಚಾಲನೆ ಸಿಕ್ಕಿತು. ಘಟಿಕೋತ್ಸವ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಳ್ಳಲಾಯಿತು. ಪಿಎಂ ಕಚೇರಿಯಿಂದ ಹಸಿರು ನಿಶಾನೆ ಸಿಕ್ಕಿದ ಬಳಿಕ ಸಮಾರಂಭ ಆಯೋಜಿಸಲು ಮೂರು ದಿನಗಳನ್ನು ನಿಗಧಿ ಪಡಿಸಿ ಸಮ್ಮತಿಗೆ ಕಳುಹಿಸಿದೆವು. ಮೈಸೂರು ವಿವಿ ಅ. 12, 15 ಹಾಗೂ ಅ.19 ಮೂರು ದಿನಾಂಕಗಳನ್ನು ಉಲ್ಲೇಖಿಸಿ ಪತ್ರ ಬರೆದಿತ್ತು. ಈ ನಿಗಧಿ ಪಡಿಸಿದ್ದ ದಿನಾಂಕಗಳ ಪೈಕಿ ಪ್ರಧಾನಿ ಕಚೇರಿಯೂ ಅ.19 ಅನ್ನು ಅಂತಿಮಗೊಳಿಸಿ ಘಟಿಕೋತ್ಸವಕ್ಕೆ ಅನುಮತಿ ನೀಡಿತು.

Mysore-university-centenary-convocation-prime.minister-narendra.modi-co-incident-digital-virtual-address

ಮಾರ್ಚ್ ನಲ್ಲಿ ನಡೆಯಬೇಕಿದ್ದ ಘಟಿಕೋತ್ಸವ ಅಕ್ಟೋಬರ್ ನಲ್ಲಿ ನಡೆಯುವಂತಾದದ್ದು, ಜತೆಗೆ 19 ನೇ ತಾರಿಕಿನಂದೇ ಕಾರ್ಯಕ್ರಮಕ್ಕೆ ಪ್ರಧಾನಿ ಕಾರ್ಯಾಲಯ ಸಮ್ಮತಿಸಿದ್ದು ಕಾಕತಾಳೀಯವೇ ಆದರೂ ಅದೊಂದು ವಿಶೇಷ. ಇದು ನಿಜಕ್ಕೂ ದೇವರ ಅನುಗ್ರಹವೆಂದೇ ನಾನು ಭಾವಿಸುವೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣವನ್ನು ಜನರ ಮೆಚ್ಚಿನ ಮಹಾರಾಜರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರು ಅಮದು ಮಾಡಿದ್ದರು . ಇದೀಗ ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರು ಘಟಿಕೋತ್ಸವ ಭಾಷಣ ಮಾಡುತ್ತಿರುವುದು ಕಾಕತಾಳೀಯದ ಮತ್ತೊಂದು ವಿಶೇಷ.

ಮೈಸೂರು ವಿವಿಯ ಇತಿಹಾಸದಲ್ಲಿ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು, ವಿಜ್ಞಾನಿಗಳು, ಜ್ಞಾನಪೀಠ ಪುರಸ್ಕೃತರು ಘಟಿಕೋತ್ಸವ ಭಾಷಣ ಮಾಡಿದ್ದಾರೆ. ಆದರೆ ಈತನಕ ದೇಶದ ಪ್ರಧಾನಿ ಘಟಿಕೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಘಟಿಕೋತ್ಸವ ಭಾಷಣದ ಮೂಲಕ ಮೈಸೂರು ವಿವಿಯ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿದಂತಾಗಿದೆ.

Mysore-university-centenary-convocation-prime.minister-narendra.modi-co-incident-digital-virtual-address

ವರ್ಚುವಲ್ ಭಾಷಣದ ಮೂಲದ ಪ್ರಧಾನಿ ನರೇಂದ್ರ ಮೋದಿ ಘಟಿಕೋತ್ಸವ ಭಾಷಣ ಮಾಡುತ್ತಿರುವುದು, ಪ್ರಧಾನಿಯ ಡಿಜಿಟಲ್ ಭಾರತದ ಕನಸಿಗೆ ಪೂರಕವಾಗಿದೆ. ಪ್ರತಿಷ್ಠಿತ ಮೈಸೂರು ವಿವಿ ಅತ್ಯಂತ ಹಳೇಯ ವಿಶ್ವವಿದ್ಯಾನಿಲಯ ಎಂಬ ಹೆಮ್ಮೆಗೆ ಪಾತ್ರವಾಗಿರುವಂತೆ, ಇದೀಗ ಡಿಜಿಟಲ್ ಜಮಾನಕ್ಕೂ ಸೈ ಎಂಬುದನ್ನು ನಿರೂಪಿಸುತ್ತಿರುವುದು 100 ನೇ ಘಟಿಕೋತ್ಸವ ವಿಶೇಷ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

OOOOO

key words : Mysore-university-centenary-convocation-prime.minister-narendra.modi-co-incident-digital-virtual-address