ಕರ್ನಾಟಕ ಉಪ ಲೋಕಾಯುಕ್ತರಾಗಿ ಕೆ.ಎನ್.ಫಣೀಂದ್ರ ನೇಮಕ.

ಬೆಂಗಳೂರು,ಮಾರ್ಚ್,23,2022(www.justkannada.in): ಎರಡು ವರ್ಷಗಳಿಂದ ಖಾಲಿ ಇದ್ದ ಕರ್ನಾಟಕ ಉಪ ಲೋಕಾಯುಕ್ತರ ಹುದ್ದೆಗೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಆನಂದ ಅವರ ಸೇವಾವಧಿ 2020 ರ ಡಿಸೆಂಬರ್ ನಲ್ಲಿ ಅಂತ್ಯವಾಗಿತ್ತು.  ಇದೀಗ ಈ ಹುದ್ದೆಗೆ ನಿವೃತ್ತ ನ್ಯಾ. ಕೆ.ಎನ್.ಫಣೀಂದ್ರ ಅವರನ್ನು ನೇಮಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೆಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ ಕೀರ್ತಿ  ಕೆ.ಎನ್.ಫಣೀಂದ್ರ ಅವರಿಗೆ ಸಲ್ಲುತ್ತದೆ.

Key words: KN Fanindra -appointed –  Karnataka- deputy Lokayukta