ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಸವಿತಾ ಕಾಂಬಳೆ ಆಯ್ಕೆ

ಬೆಳಗಾವಿ,ಫೆಬ್ರವರಿ,15,2024(www.justkannada.in): ಬೆಳಗಾವಿ ಮಹನಗರ ಪಾಲಿಕೆಯನ್ನ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಉಪಮೇಯರ್ ಆಗಿ ಮರಾಠಿಯ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ಬಿಜೆಪಿಯ‌ ಆನಂದ್ ಚವ್ಹಾಣ್​ 39 ಮತ ಹಾಗೂ ಕಾಂಗ್ರೆಸ್‌‌ನ ಜ್ಯೋತಿ ಕಡೋಲ್ಕರ್‌ 20 ಮತಗಳು ಪಡೆದುಕೊಂಡಿದ್ದಾರೆ. ಇದರೊಂದಿಗೆ ಆನಂದ್ ಗೆಲುವು ಸಾಧಿಸಿದ್ದಾರೆ.

ಇನ್ನು ಬಿಜೆಪಿಯ ಸವಿತಾ ಕಾಂಬಳೆ ಬೆಳಗಾವಿಯ 22ನೇ ಅವಧಿಯ ‌ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.  ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೊಬ್ಬ ಅಭ್ಯರ್ಥಿ ಲಕ್ಷ್ಮಿ ರಾಠೋಡ ಅವರು‌ ತಮ್ಮ ಉಮೇದುವಾರಿಕೆ‌ ಹಿಂದಕ್ಕೆ ಪಡೆದುಕೊಂಡರು.

ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ. ಆಡಳಿತಾರೂಢ ಬಿಜೆಪಿಯ 17ನೇ ವಾರ್ಡ್ ಸದಸ್ಯೆ ಸವಿತಾ ಕಾಂಬಳೆ ಹಾಗೂ 35ನೇ ವಾರ್ಡ್ ಸದಸ್ಯೆ ಲಕ್ಷ್ಮಿ ರಾಠೋಡ ನಾಮಪತ್ರ ಸಲ್ಲಿಸಿದ್ದರು.

ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ 44ನೇ ವಾರ್ಡ್ ಸದಸ್ಯ ಆನಂದ ಚೌಹ್ವಾನ್ ಹಾಗೂ 54ನೇ ವಾರ್ಡ್ ಸದಸ್ಯ ಮಹಾದೇವಿ ರಾಗೋಚೆ ನಾಮಪತ್ರ ಸಲ್ಲಿಸಿದ್ದರು.

ಮೇಯರ್ ಮೀಸಲಾತಿಯ ಕಾರಣ ವಿರೋಧ ಪಕ್ಷವಾದ ಕಾಂಗ್ರೆಸ್‌ನಿಂದ ಯಾರೂ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಮೇಯರ್‌ ಆಯ್ಕೆ ಅವಿರೋಧವಾಗಿ ನಡೆದಿದೆ.

Key words: Belgaum -Corporation – BJP –Mayor