ಅಂಬಿ ಸ್ಮಾರಕ ನಿರ್ಮಾಣಕ್ಕೆ ಮನವಿ ಮಾಡಲು ಹೋದಾಗ ಪತ್ರವನ್ನೆ ಮುಖಕ್ಕೆ ಎಸೆದಿದ್ರು- ಹೆಚ್.ಡಿಕೆ ವಿರುದ್ಧ ಸುಮಲತಾ ಅಂಬರೀಶ್ ಮತ್ತೆ ವಾಗ್ದಾಳಿ.

ಮಂಡ್ಯ,ಜುಲೈ,9,2021(www.justkannada.in): ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಂಬರೀಶ್ ಸ್ಮಾರಕ ನಿರ್ಮಾಣ ಕುರಿತು  ಮನವಿ ಸಲ್ಲಿಸಲು ದೊಡ್ಡಣ್ಣ ಹಾಗೂ ಶಿವರಾಂ ಹೋಗಿದ್ದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಮನವಿ ಪತ್ರವನ್ನ ಮುಖಕ್ಕೆ ಎಸೆದಿದ್ದರು. ಇಂತಹ ಕುಮಾರಸ್ವಾಮಿಗೆ ಅಂಬರೀಶ್ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್  ವಾಗ್ದಾಳಿ ನಡೆಸಿದರು.jk

ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಮತ್ತೆ ಗುಡುಗಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಸಿಎಂ ಯಡಿಯೂರಪ್ಪ. ಅಂಬರೀಶ್ ಸ್ಮಾರಕ ವಿಚಾರಕ್ಕೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ದೊಡ್ಡಣ್ಣ ಹಾಗೂ‌ ಶಿವರಾಂ ಮುಖಕ್ಕೆ ಪತ್ರ ಎಸೆದು‌ ಹೋಗಿದ್ದರು. ನಾನೇಕೆ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲಿ. ಅವರೇನು ಸಾಧನೆ ಮಾಡಿದ್ದಾರೆ ಎಂದು ಸ್ಮಾರಕ ನಿರ್ಮಿಸಲಿ ಎಂದು ಹೇಳಿದ್ದರು.  ಅಂತಹವರು ಅಂಬರೀಶ್ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

 ಜೆಡಿಎಸ್ ನಾಯಕರು ನನ್ನ ವಿರುದ್ದ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಜನರ ಮುಂದೆ ಅವರ ಬಣ್ಣ ಬಯಲು‌ ಮಾಡಿಕೊಳ್ಳುತ್ತಿದ್ದಾರೆ. ಅವರು ಇದೇ ರೀತಿ ಮಾತನಾಡುತ್ತಿರಲಿ ಅವರ ವ್ಯಕ್ತಿತ್ವ ನಿಜ ಸ್ವರೂಪ ಏನೆಂದು ಜನರಿಗೆ ತಿಳಿಯುತ್ತೆ. ಲೂಸ್ ಟಾಕ್ ಗೆ ಅವರ ಹೇಳಿಕೆ ಉತ್ತಮ ಉದಾಹಾರಣೆ. ಇಷ್ಟು ವರ್ಷ ಯಾಕೆ ಸುಮ್ಮನಿದ್ದರು.  ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲ. ಆದ್ರೂ ಅಂಬರೀಶ್ ಹೆಸರು ಹೇಳಿ ರಾಜಕೀಯ ಮಾಡ್ತಿದ್ದಾರೆ ಎಂದು ಹೆಚ್.ಡಿಕೆ ವಿರುದ್ಧ ಸುಮಲತಾ ಅಂಬರೀಶ್ ಹರಿಹಾಯ್ದರು .

Key words: MP-Sumalatha Ambarish -again – against –Former CM-HD kumaraswamy