ಜುಲೈ 11 ರಂದು ನೂತನ ರಾಜ್ಯಪಾಲರ ಪದಗ್ರಹಣ.

ಬೆಂಗಳೂರು,ಜುಲೈ,9,2021(www.justkannada.in):  ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಥಾವರ್ ಚಂದ್ ಗೆಹ್ಲೋಟ್  ಅವರ ಪದಗ್ರಹಣಕ್ಕೆ ಸಮಯ ನಿಗದಿಯಾಗಿದೆ.jk

ಜುಲೈ(ಭಾನುವಾರ) 11 ರಂದು ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದುಯ ಬೆಳಿಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಸಿ.ಜೆ ಎಎಸ್ ಓಕಾ ಅವರು ನೂತನ ರಾಜ್ಯಪಾಲರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಅವಧಿ ಮುಗಿದರೂ ಸಹ ವಜುಭಾಯಿ ವಾಲಾ ಅವರು ರಾಜ್ಯಪಾಲರಾಗಿ ಮುಂದುವರೆದಿದ್ದರು. ಈ ಮಧ್ಯೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕರ್ನಾಟಕ ಸೇರಿ 8 ರಾಜ್ಯಗಳಿಗೆ ರಾಜ್ಯಪಾಲರನ್ನ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Key words: Karnataka-New Governor- Oath-July 11