Thursday, September 17, 2026

BDA Apartments

ರಾಷ್ಟ್ರೀಯ ರೈತ ದಿನಾಚರಣೆ : ಅನ್ನದಾತರಿಗೆ ಸಿಎಂ,ಮಾಜಿ ಸಿಎಂ ಶುಭಹಾರೈಸಿದ್ದು...
Home Front Page ರಾಷ್ಟ್ರೀಯ ರೈತ ದಿನಾಚರಣೆ : ಅನ್ನದಾತರಿಗೆ ಸಿಎಂ,ಮಾಜಿ ಸಿಎಂ ಶುಭಹಾರೈಸಿದ್ದು, ಹೀಗೆ…!

ರಾಷ್ಟ್ರೀಯ ರೈತ ದಿನಾಚರಣೆ : ಅನ್ನದಾತರಿಗೆ ಸಿಎಂ,ಮಾಜಿ ಸಿಎಂ ಶುಭಹಾರೈಸಿದ್ದು, ಹೀಗೆ…!

ಬೆಂಗಳೂರು,ಡಿಸೆಂಬರ್,23,2020(www.justkannada.in) : ರಾಷ್ಟ್ರೀಯ ರೈತ ದಿನಾಚರಣೆಯಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅನ್ನದಾತರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ರಾಜ್ಯದ ಸಮಸ್ತ ರೈತ ಬಾಂಧವರಿಗೆ ’ಕಿಸಾನ್ ದಿವಸ’ದ ಹೃತ್ಪೂರ್ವಕ ಶುಭಕಾಮನೆಗಳು. ರೈತಾಪಿ ವರ್ಗ ಸಂಕಷ್ಟದಲ್ಲಿದ್ದರೆ ದೇಶ ಎಂದಿಗೂ ಸಶಕ್ತವಾಗದು. ನಮ್ಮ ಅನ್ನದಾತ ರೈತನೇ ದೇಶದ ಬೆನ್ನೆಲುಬು. ರೈತನ ಹಿತರಕ್ಷಣೆ ಮತ್ತು ಏಳಿಗೆ ನಮ್ಮ ಬದ್ಧತೆಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರವೃತ್ತವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು, ದೇಶದಲ್ಲಿ ನಡೆಯುತ್ತಿರುವುದು ರೈತ ಪರ ಮತ್ತು ರೈತ ವಿರೋಧಿಗಳ ನಡುವಿನ ಹೋರಾಟ. ಕಾಂಗ್ರೆಸ್ ಹಿಂದೆಯೂ ಇಂದು ಮತ್ತು ಮುಂದೆಯೂ ಸದಾ ರೈತರ ಪರ ಎಂದಿದ್ದಾರೆ.National-Farmers'-Day-farmers-CM-former CM-Good luck-so ...!

ಅನ್ನ ತಿನ್ನುವ ನಾವೆಲ್ಲರೂ ಕೃಷಿ ವಿರೋಧಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ನಮ್ಮ ದನಿ ಸೇರಿಸೋಣ. ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

key words : National-Farmers’-Day-farmers-CM-former CM-Good luck-so …!