ಕೌಟುಂಬಿಕ ಕಲಹ, ವ್ಯಕ್ತಿಯೊಬ್ಬ ನೇಣಿಗೆ ಶರಣು..!

ಮೈಸೂರು,ಡಿಸೆಂಬರ್,23,2020(www.justkannada.in) : ಕೌಟುಂಬಿಕ ಕಲಹದಿಂದ ನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.Teachers,solve,problems,Government,bound,Minister,R.Ashok

ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಣೇಶ್ ನಾಯಕ(೪೫) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಗಣೇಶ್ ನಾಯಕ್ ಪತ್ನಿ ಹೇಮಾವತಿಯಿಂದ ಬೇರಾಗಿದ್ದು, ಜೀವನಾಂಶಕ್ಕಾಗಿ ಪತ್ನಿ ಹೇಮಾವತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲು ವಿಫಲನಾಗಿದ್ದ ಗಣೇಶ ನಾಯಕ ಈ ಹಿನ್ನಲೆ ಜೈಲು ವಾಸ ಅನುಭವಿಸಿದ್ದ ಎಂದು ತಿಳಿದು ಬಂದಿದೆ.

Family-strife-person-Hanging-Surrender ..!

ಸೋಮವಾರ ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಗಣೇಶ ನಾಯಕ  ಮನನೊಂದು ಜಮೀನಲ್ಲಿ ನೇಣಿಗೆ ಶರಣಾಗಿದ್ದಾರೆ. ಪತ್ನಿ ಹಾಗೂ ಮಕ್ಕಳ ವಿರುದ್ದ ಗಣೇಶ್ ನಾಯಕ ಸಂಬಂಧಿಕರು ದೂರು ನೀಡಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Family-strife-person-Hanging-Surrender ..!