ಬೆಂಗಳೂರು,ಸೆಪ್ಟಂಬರ್,17,2026 (www.justkannada.in): ಇ-ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪಡಿತರ ಕಾರ್ಡುದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ಪಡಿತರ ಇ-ಕೆವೈಸಿ ಅಂತಿಮ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಣೆ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಪಡಿತರ ಇ-ಕೆವೈಸಿ ಮಾಡಿಸಲು ಸೆಪ್ಟಂಬರ್ 30 ಅಂತಿಮ ದಿನಾಂಕವಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸರಿಯಾಗಿ ಇ-ಕೆವೈಸಿ ಆಗುತ್ತಿರಲಿಲ್ಲ. ೀ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಇ-ಕೆವೈಸಿ ಗಡುವು ಅಕ್ಟೋಬರ್ 20ಕ್ಕೆ ವಿಸ್ತರಣೆ ಮಾಡಿದೆ.
ಹಾಗೆಯೇ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿ ವೇಳಾಪಟ್ಟಿ ಬದಲಾವಣೆ ಮಾಡಿದೆ. ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಓಪನ್ ಇರಬೇಕು ಸಂಜೆ 4 ರಿಂದ 8ಗಂಟೆವರೆಗೆ ಪಡಿತರ ವಿತರಿಸಬೇಕು ಪ್ರತಿದಿನ ಕಡ್ಡಾಯವಾಗಿ 8 ಗಂಟೆಗಳ ಕಾಲ ರೇಷನ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.







