Thursday, September 17, 2026

BDA Apartments

Lokayukta BDA JK_Adv BDA Adv
Home Crime 50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್: 14 ದಿನ ನ್ಯಾಯಾಂಗ...

50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್: 14 ದಿನ ನ್ಯಾಯಾಂಗ ಬಂಧನ

ಧಾರವಾಡ,ಸೆಪ್ಟಂಬರ್,17,2026 (www.justkannada.in):  50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ  ಕೂಚನೂರ ಲೋಕಾಯುಕ್ತ ಬಲೆಗೆ ಬಿದ್ದವರು. ತಹಶೀಲ್ದಾರ್ ಸಚ್ಚಿದಾನಂದ ಅವರು  ವ್ಯಕ್ತಿಯೊಬ್ಬರ ಬಳಿ ಭೂಮಿ ಎ ಖರಾಬು ತೆಗೆಯಲು 1 ಕೋಟಿ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 50 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ತಹಶೀಲ್ದಾರ್ ಸಚ್ಚಿದಾನಂದ  ಕೂಚನೂರ ಅವರನ್ನ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು ಲೋಕಾಯುಕ್ತ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.Lokayukta jk02_new jk02 new

ರಾಜ್ಯದಲ್ಲ ಇದು ದೊಡ್ಡ ದಾಳಿಯಾಗಿದೆ.   ಲಂಚ ಪಡೆಯುವಾಗ ಧಾರವಾಡ ತಹಶೀಲ್ದಾರ್ ಟ್ರ್ಯಾಪ್ ಮಾಡಿದ್ದೇವೆ ಎಂದು ಲೋಕಾಯುಕ್ತ ಎಸ್ ಪಿ ಸಿದ್ದಲಿಂಗಪ್ಪ  ತಿಳಿಸಿದ್ದಾರೆ.

 

English Summary
Title

Dharwad Tahsildar Trapped by Lokayukta for ₹50 Lakh Bribe Case

Short Description
The Karnataka Lokayukta caught Dharwad Tahsildar Sachidananda Kuchanur red-handed while accepting a massive ₹50 lakh bribe. The anti-corruption wing laid a late-night trap near Karnatak College in Dharwad following a complaint by a land developer. Kuchanur had allegedly demanded a total of ₹1 crore and one acre of land to rectify records and complete a fresh land subdivision for a 33-acre property in Yarikoppa village. Lokayukta officials seized the cash installment, took the officer into custody, and are searching his premises as the corruption investigation continues.
Keywords
Lokayukta, trap, Tahsildar, accepting, ₹50 lakh, bribe