ಗ್ರಾಪಂ ಚುನಾವಣೆ ಹಿನ್ನೆಲೆ : ನ.17ರಂದು ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಗಳೊಂದಿಗೆ ಸಭೆ

ಬೆಂಗಳೂರು,ನವೆಂಬರ್,12,2020(www.justkannada.in) : ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ನವೆಂಬರ್ ೧೭ರಂದು ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳ ಸಭೆ ಕರೆದಿದೆ.kannada-journalist-media-fourth-estate-under-loss

ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಜೊತೆ ಚುನಾವಣಾ ಆಯುಕ್ತರ ವಿಡಿಯೋ ಸಂವಾದ ನಡೆಸಲಿದ್ದು, ಆಯೋಗದ ಅಧೀನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಿದ್ದಾರೆ.

ಗ್ರಾ.ಪಂ ಚುನಾವಣೆ ಪೂರ್ವ ಸಿದ್ದತೆಗಳು, ಕೋವಿಡ್ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ ನೆರೆ, ಪ್ರವಾಹ ಪರಿಸ್ಥಿತಿ ಹಿನ್ನಲೆ ಮತಗಟ್ಟೆಗಳ ಸ್ಥಿತಿ ಮತ್ತು ಮತಗಟ್ಟೆ ಅಧಿಕಾರಿಗಳ ನೇಮಕ ಮತ್ತು ತರಬೇತಿ ಸೇರಿದಂತೆ ಮಲ್ಟಿಚಾಯ್ಸ್ ಇವಿಎಂಗಳ ಸಂಗ್ರಹಣೆ, ಸಿದ್ದತೆ ಹೀಗೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ನವಂಬರ್ ೧೭ ರಂದು ಬೆಳಿಗ್ಗೆ ಬೆಂಗಳೂರು,ಕಲ್ಬುರ್ಗಿ ವಿಭಾಗ, ಅಂದೇ ಮಧ್ಯಾಹ್ನ ಬೆಳಗಾವಿ,ಮೈಸೂರು ವಿಭಾಗದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ಚುನಾವಣಾ ಆಯುಕ್ತರು ಸಭೆ ನಡೆಸಲಿದ್ದಾರೆ.

Grapham-Background-State-Election-Nov.17-Meeting-District-Officers-Commission

 

English summary…..

Gram Panchayat Elections: State Election Commission meeting with Deputy Commissioner on Nov. 17
Bengaluru, Nov. 12, 2020 (www.justkannada.in): The State Election Commission has organized a meeting with the Deputy Commissioner on November 17, 2020 to discuss about the forthcoming Gram Panchayat elections. The meeting will be held via video conferencing with the Deputy Commissioners of Bengaluru, Kalaburagi divisions in the morning and with Belagavi, Mysuru Division in the afternoon.

key words : Grapham-Background-State-Election-Nov.17-
Meeting-District-Officers-Commission