Tuesday, September 1, 2026

BDA Apartments

Home Election News and Analysis ಬಳ್ಳಾರಿ, ಉ.ಕನ್ನಡ ಸೇರಿ ಹಲವು ಕಡೆ ಬಿಜೆಪಿ ಜಯಭೇರಿ…

ಬಳ್ಳಾರಿ, ಉ.ಕನ್ನಡ ಸೇರಿ ಹಲವು ಕಡೆ ಬಿಜೆಪಿ ಜಯಭೇರಿ…

ಬಳ್ಳಾರಿ,ಮೇ,23,2019(www.justkannada.in):  ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ದೇಶದಲ್ಲಿ ಎನ್ ಡಿಎ ಭರ್ಜರಿ ಜಯಸಾಧಿಸುತ್ತಿದ್ದು ಈ ನಡುವೆ ರಾಜ್ಯದಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಳ್ಳಾರಿಯಲ್ಲಿ . ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪಗೆ ಗೆಲುವು ಸಾಧಿಸಿದ್ದು. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಸೋಲನುಭವಿಸಿದ್ದಾರೆ.   ಹಾಗೆಯೇ ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗ್ಗಡೆ, ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲ್,  ಉಡುಪಿ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೊಷಣೆಯೊಂದೇ ಬಾಕಿ ಉಳಿದಿದೆ.

ಇನ್ನು ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.  ಹಾಲಿ ಸಂಸದ  ಮೈತ್ರಿ ಅಭ್ಯರ್ಥಿ ಮುನಿಯಪ್ಪಗೆ ಸೋಲುಂಟಾಗಿದೆ. 7 ಬಾರಿ ಸಂಸದರಾಗಿದ್ದ ಕೆ.ಎಚ್ ಮುನಿಯಪ್ಪ ಈ ಬಾರಿ ಸೋತಿದ್ದಾರೆ. ಇನ್ನು ತುಮಕೂರು,  ಚಿಕ್ಕಬಳ್ಳಾಪುರ, ಕಲ್ಬುರ್ಗಿ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿ ಹಲವು ಕಡೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ದಾಪುಗಾಲಿಡುತ್ತಿದೆ.

Key words:  Karnataka: BJP won in many constituencies.

#election2019 #result