ತನಗಿಷ್ಟವಾದ ಜಾಗ್ವಾರ್ ಕಾರಿನ ಬದಲು ಬಿಎಂಡಬ್ಲ್ಯು ಕೊಡಿಸಿದರೆಂದು ಕೋಪಗೊಂಡು ಕಾರನ್ನೇ ನದಿಗೆ ತಳ್ಳಿದ ಮಗ

ಚಂಡೀಗಢ:ಆ-11:(www.justkannada.in) ಅಪ್ಪ ತನಗಿಷ್ಟವಾದ ಜಾಗ್ವಾರ್ ಕಾರಿನ ಬದಲು ಬಿಎಂ ಡಬ್ಲ್ಯೂ ಕಾರನ್ನು ಕೊಡಿಸಿದ್ದಕ್ಕೆ ಕೋಪಗೊಂಡ ಮಗ ಅಪ್ಪ ಕೊಡಿಸಿದ ಕಾರನ್ನು ನದಿಗೆ ತಳ್ಳಿದ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರ್ಯಾಣದ ಯಮುನಾನಗರದ ನಿವಾಸಿ ಯುವಕನಿಗೆ ಜಾಗ್ವಾರ್​ ಕಂಪನಿಯ ಐಷಾರಾಮಿ ಕಾರು ಖರೀದಿಸಬೇಕು ಎಂಬ ಮಹದಾಸೆಯಿತ್ತು. ಆದರೆ, ಈತನ ಅಪ್ಪನಿಗೆ ಬಿಎಂಡಬ್ಲ್ಯು ಐಷಾರಾಮಿ ಕಾರು ಅಂದರೆ ಇಷ್ಟ. ಹಾಗಾಗಿ ಮಗನಿಗೆ ತನಗಿಷ್ಟವಾದ ಬಿಎಂ ಡಬ್ಲ್ಯು ಕಾರನ್ನು ಕೊಡಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ಶೋರೂಂನಿಂದ ಕಾರನ್ನು ಪಡೆದುಕೊಂಡು ಮನೆಗೆ ತಂದು, ಬಳಿಕ ಅದನ್ನು ಚಲಾಯಿಸಿಕೊಂಡು ಹೋಗಿ ಉಕ್ಕಿ ಹರಿಯುತ್ತಿದ್ದ ನದಿಯೊಳಗೆ ನೂಕಿದ್ದಾನೆ.

ಅಷ್ಟೇ ಅಲ್ಲ ಈ ಕೃತ್ಯವನ್ನು ತನ್ನ ಮೊಬೈಲ್​ ಫೋನ್​ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾನೆ. ಹೀಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು, ನದಿ ಮಧ್ಯೆ ಪೊದೆಯಲ್ಲಿ ಸಿಲುಕಿಕೊಂಡಿದೆ. ಈ ಸಂದರ್ಭದಲ್ಲಿ ಯುವಕನಿಗೆ ಜ್ಞಾನೋದಯವಾಗಿದೆ. ತಕ್ಷಣವೇ ಆತ ನುರಿತ ಮುಳುಗುತಜ್ಞರ ಸಹಾಯದಿಂದ ಕಾರನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಸ್ಥಳೀಯರ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿದ್ದಾರೆ.

ತನಗಿಷ್ಟವಾದ ಜಾಗ್ವಾರ್ ಕಾರಿನ ಬದಲು ಬಿಎಂಡಬ್ಲ್ಯು ಕೊಡಿಸಿದರೆಂದು ಕೋಪಗೊಂಡು ಕಾರನ್ನೇ ನದಿಗೆ ತಳ್ಳಿದ ಮಗ

Denied Jaguar, Haryana youth pushes BMW into river