ನನ್ನ ಆಸ್ತಿ ಮಾರಿಯಾದರೂ ಪರಿಹಾರ ಕೊಡುವೆ- ನೆರೆ ಸಂತ್ರಸ್ತರಿಗೆ ಬಿಜೆಪಿ ಶಾಸಕ ಅಭಯ…

ಬೆಳಗಾವಿ,ಆ,11,2019(www.justkannada.in): ರಾಜ್ಯದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಬೆಳಗಾವಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಈ ನಡುವೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತ್ರಸ್ತರಿಗೆ ಧೈರ್ಯ ಹೇಳಿ ತನ್ನ ಆಸ್ತಿ ಮಾರಿಯಾದರೂ ಪರಿಹಾರ ಕೊಡುವೆ ಎಂದು ಭರವಸೆ ನೀಡಿದ್ದಾರೆ.

ಇಂದು ಬೆಳಗಾವಿಯಲ್ಲಿ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅರಬಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತ್ರಸ್ತರ ಸಮಸ್ಯೆ ಆಲಿಸಿ ಆತ್ಮಸ್ಥೈರ್ಯ ತುಂಬಿದರು. ಬಳಿಕ ಸರ್ಕಾರ ಪರಿಹಾರ ನೀಡದಿದ್ದರೇ ನಾನೇ ನನ್ನ ಆಸ್ತಿ ಮಾರಾಟ ಮಾಡಿ ಪರಿಹಾರ ನೀಡುತ್ತೇನೆ ಎಂದು ಅಭಯ ನೀಡಿದರು.

ರಾಜ್ಯದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕರ್ನಾಟಕದ 15ಕ್ಕೂ  ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದ ಈವರೆಗೆ 6,000 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದ್ದು, ಮಳೆ ಮುಂದುವರೆದರೆ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.

Key words: sell-my property- Relief- money- BJP MLA – neighboring victims-belagavi