ದಯಾಮಾಡಿ ಈ ಬಾರಿ ಈ ಹೆಣ್ಣು ಮಗಳನ್ನ ಗೆಲ್ಲಿಸಿಕೊಡಿ- ಶಿರಾ ಕ್ಷೇತ್ರದ ಜನತೆಗೆ ಮಾಜಿ ಪ್ರಧಾನಿ ಹೆಚ್.ಡಿ  ದೇವೇಗೌಡ ಮನವಿ….

ತುಮಕೂರು,ಅಕ್ಟೋಬರ್,22,2020(www.justkannada.in): ದಿವಂಗತ ಸತ್ಯನಾರಾಯಣ್ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ. ಅಂತವರ ಶ್ರೀಮತಿ ಅವರು ವಿಧಾನಸಭೆಗೆ ಹೋಗಲೇಬೇಕು. ಹೀಗಾಗಿ ದಯಮಾಡಿ ಈ ಬಾರಿ ಈ ಹೆಣ್ಣು ಮಗಳನ್ನ ಗೆಲ್ಲಿಸಿಕೊಡಿ . ನಿಮ್ಮ ವಿಶ್ವಾಸಕ್ಕೆ ಎಂದು ಚ್ಯುತಿ ಬರದ ರೀತಿ ಅಮ್ಮಾಜಮ್ಮ ಅವರು ನಡೆದುಕೊಳ್ಳುತ್ತಾರೆ  ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶಿರಾಕ್ಷೇತ್ರದ ಜನತೆಗೆ ಮನವಿ ಮಾಡಿದರು.

ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ದಿವಂಗತ ಸತ್ಯನಾರಾಯಣ್ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ , ರೈತ ಪರ ಹೋರಾಟಗಾರ , ಶಿರಾ ತಾಲ್ಲೂಕಿಗೆ ಅವರ ಕೊಡುಗೆ ಅಪಾರ , ಜೆ.ಎಚ್.ಪಟೇಲರ ಸಂಪುಟದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಸರಿಯಾಗಿ ಸಿಗಲಿಲ್ಲ ಎಂದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪುಣ್ಯಾತ್ಮ , ಅಂದು ನಾನು ದೆಹಲಿಯಿಂದ ಬಂದು ರಾಜೀನಾಮೆ ವಾಪಾಸ್ ಪಡೆಯಿರಿ.  ಪಟೇಲರ ಜೊತೆ ಮಾತಾಡಿ ಸರಿಪಡಿಸುತ್ತೀನಿ ಎಂದು ಹೇಳಿದರೂ ನನ್ನ ಮಾತು ಕೇಳಲಿಲ್ಲ , ತಕ್ಷಣ ಪಟೇಲರ ಜೊತೆ ಮಾತಾಡಿ ಪರಿಹಾರ ಕೊಡಿಸಿದ ಮೇಲೆ ರಾಜೀನಾಮೆ ವಾಪಸ್ ಪಡೆದರು , ಸತ್ಯನಾರಾಯಣ್ ಅವರಿಗೆ ಸತ್ಯನಾರಾಯಣ್ ಅವರೇ ಸಾಟಿ  ಎಂದು ಗುಣಗಾನ ಮಾಡಿದರು.

ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಪಕ್ಷವೊಂದು ಏನೇ ಆಮಿಷ ಒಡ್ಡಿದರು ಅದಕ್ಕೆ ತಲೆಬಾಗದೆ ಪಕ್ಷದ ಜೊತೆ ನಿಂತ ಮಹಾನ್ ವ್ಯಕ್ತಿ , ಅಂತವರ ಶ್ರೀಮತಿ ಅವರು ವಿಧಾನಸಭೆಗೆ ಹೋಗಲೇಬೇಕು , ಅವರು ಶಾಸಕರಾಗಲು ಶಿರಾ ಜನತೆಯ ಆಶಿರ್ವಾದ ಬೇಕು , ದಯಮಾಡಿ ಈ ಬಾರಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನಿ ಎಂದು ಮನವಿ ಮಾಡಿದರು.jk-logo-justkannada-logo

ಪ್ರಾದೇಶಿಕ ಪಕ್ಷ ಕೆಡವಲು ಹೊರಟಿರುವ ರಾಷ್ಟ್ರೀಯ  ಪಕ್ಷಗಳು…

ಎರಡು ರಾಷ್ಟೀಯ ಪಕ್ಷಗಳು ಸುಖಾಸುಮ್ಮನೆ ಪ್ರಾದೇಶಿಕ ಪಕ್ಷವನ್ನು ಕೆಡವಲು ಹೊರಟಿದೆ.  ಆದರೆ ಜನತೆ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ , ಆ ನಂಬಿಕೆ ಸದಾ ನನಗೆ ಇದೆ. ಪಕ್ಕದ ಆಂಧ್ರಪ್ರದೇಶ , ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ಜನತೆ ಪ್ರಾದೇಶಿಕ ಪಕ್ಷಗಳ ಜೊತೆ ಇದ್ದಾರೆ , ಅದಕ್ಕೆ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಬಂದರು ಈ ಮೂರು ರಾಜ್ಯಗಳ ಪ್ರಾದೇಶಿಕ ಪಕ್ಷದ ನಾಯಕರ ಮನೆ ಮುಂದೆ ಬಂದು ನಿಲ್ಲುತ್ತಾರೆ  ಎಂದು ಹೆಚ್.ಡಿಡಿ ವಿವರಿಸಿದರು.

 ಬಿಎಸ್ ವೈ ರಿಂದ ರಾಜ್ಯಕ್ಕೆ ಸ್ಪಂದನೆ ಸಿಗುತ್ತಿಲ್ಲ…

ಇದೇ ವೇಳೆ ಸಿಎಂ ಬಿಎಸ್ ವೈ ಕಾರ್ಯವೈಖರಿ ಬಗ್ಗೆ ಟೀಕೆ ವ್ಯಕ್ತಪಡಿಸಿದ ಹೆಚ್.ಡಿ ದೇವೇಗೌಡರು, ನಮ್ಮ ರಾಜ್ಯದಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿ ಇರಬಹುದು. ಆದರೆ ದುರ್ದೈವ ನಮ್ಮ ರಾಜ್ಯಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ , ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ವಾಗಿಲ್ಲ , ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೀನಿ ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಇದರ ಬಗ್ಗೆ ಮಾತನಾಡುತ್ತೀನಿ ಎಂದರು.

ನನ್ನ ಕಾಲದಲ್ಲಿ ರಾಜ್ಯಕ್ಕೆ ಒಳ ಮೀಸಲಾತಿ ಮಾಡಿದ ಕಾರಣ ಎಲ್ಲಾ ವರ್ಗದವರು ಪಾಲಿಕೆಗಳಲ್ಲಿ , ಜಿಲ್ಲಾ ಪಂಚಾಯಿತಿಗಳಲ್ಲ  ತಾಲೂಕು ಪಂಚಾಯಿತಿ ಗಳಲ್ಲಿ ಹಾಗು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಮಾಡುವಂತಾಗಿದೆ , ಆಗ ಸಿದ್ದರಾಮಯ್ಯ ಅವರು ನನ್ನ ಜೊತೆಯಲ್ಲೇ ಇದ್ದರು , ಇದರ ಬಗ್ಗೆ ಸಿದ್ದರಾಮಯ್ಯ ಅವರು ಪ್ರಾಮಾಣಿಕವಾಗಿ ಹೇಳಬೇಕು , ನಾನು ಮಹಿಳೆಯರಿಗೂ ಕೂಡ ಮೀಸಲಾತಿ ನೀಡಿದ್ದೀನಿ , ಇದರ ಬಗ್ಗೆ ಯಾವ ಚರ್ಚೆಗೂ ಸಹ ಸಿದ್ಧನಿದ್ದೀನಿ ಎಂದು ಹೆಚ್.ಡಿ ದೇವೇಗೌಡ ಸವಾಲು ಹಾಕಿದರು.former-prime-minister-hd-deve-gowda-appeals-people-shira-constituency

ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ , ಯಾರು ನನ್ನ ಬಗ್ಗೆ ಬೆಟ್ಟು ಮಾಡಿ ತೋರಿಸಿ ಮಾತನಾಡುವ ಆಗೇ ನನ್ನ ಸರ್ಕಾರದಲ್ಲಿ ನಡೆದುಕೊಂಡಿಲ್ಲ , ಅದು ಮುಖ್ಯಮಂತ್ರಿ ಆದಾಗವಿರಬಹುದು ಅಥವಾ ಪ್ರಧಾನಮಂತ್ರಿ ಆದಾಗವಿರಬಹುದು ನನ್ನ ಕಾಲದಲ್ಲಿ ಜಿಲ್ಲೆಗೆ  ಏನೇನು ಮಾಡಿದ್ದೀನಿ ಎಲ್ಲಾ ವಿವರ ಕೊಡಲು ಸಿದ್ಧನಿದ್ದೀನಿ , ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಾ ಮಹಾ ಜನತೆ 9 ಶಾಸಕರನ್ನ ನೀಡಿ ನನ್ನ ಕೈ ಬಲಪಡಿಸ್ಸಿದ್ದರು , ಯಾವುದೇ ಸಂದರ್ಭದಲ್ಲೂ ನನ್ನ ಹಾಗು ನಮ್ಮ ಪಕ್ಷದ ಕೈ ಬಿಟ್ಟಿಲ್ಲ , ಜಿಲ್ಲೆಯ ಋಣ ನನ್ನ ಮೇಲಿದೆ ದಯಮಾಡಿ ಕೈ ಮುಗಿದು ಕೇಳಿಕೊಳ್ಳುತ್ತೀನಿ.  ಈ ಬಾರಿ ಈ ಹೆಣ್ಣು ಮಗಳನ್ನ ಗೆಲ್ಲಿಸಿಕೊಡಿ , ನಿಮ್ಮ ವಿಶ್ವಾಸಕ್ಕೆ ಎಂದು ಚ್ಯುತಿ ಬರದ ರೀತಿ ಅಮ್ಮಾಜಮ್ಮ ಅವರು ನಡೆದುಕೊಳ್ಳುತ್ತಾರೆ , ಸತ್ಯನಾರಾಯಣ್ ಅವರಂತೆ ಅಮ್ಮಾಜಮ್ಮ ಅವರು ಕೂಡ ರೈತರ ಮತ್ತು ಬಡವರ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭರವಸೆ ನೀಡಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಗುಲಾಬ್ ನಬಿ ಆಜಾದ್ ಹಾಗೂ ಹೀಗಿನ ರಾಜಸ್ಥಾನದ ಮುಖ್ಯಮಂತ್ರಿಗಳಾದ ಗೆಹಲೋಟ್  ಅವರು ನಮ್ಮ ಮನೆಗೆ ಬಂದು ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡುತ್ತೀವಿ ಎಂದರು , ಆಗ ನಾನು ಅವರಿಗೆ ಹೇಳಿದೆ ಹಿರಿಯರಾದ ಖರ್ಗೆ ಅವರನ್ನ ಮುಖ್ಯಮಂತ್ರಿ ಮಾಡಿ ಅಂತ ಹೇಳಿದೆ  , ಆಗ ಅವರು ಇಲ್ಲಾ ಸರ್ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಂತ ತೀರ್ಮಾನ ಮಾಡಿದ್ದೀವಿ ಎಂದರು , ಈಗ ಸುಖಾಸುಮ್ಮನೆ ನಮ್ಮ ಮೇಲೆ ಇಲ್ಲ ಸಲ್ಲದ ರಾಜ್ಯದ ಕೆಲವು ನಾಯಕರು ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಹೆಚ್.ಡಿ ದೇವೇಗೌಡ ಟೀಕಿಸಿದರು.

Key wiords: Former Prime Minister- HD Deve Gowda -appeals – people -Shira constituency