18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿಳಂಬ: ಸಿಎಂ ಬಿಎಸ್ ವೈ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಏಪ್ರಿಲ್,30,2021(www.justkannada.in): ಕೋವಿಡ್ ಲಸಿಕೆ ಪೂರೈಕೆಯಾಗದ ಕಾರಣ ನಾಳೆಯಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. jk

ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ  ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಲಸಿಕೆ ಪೂರೈಕೆಯಾಗದ ಹಿನ್ನೆಲೆ  ನಾಳೆಯಿಂದ ಕೊರೋನಾ ಲಸಿಕೆ ಸಿಗೋದು ಡೌಟ್ ಎಂದೇ ಹೇಳಲಾಗುತ್ತಿತ್ತು.

ಈ  ಕುರಿತು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆಯಿಂದ ಕೊರೋನಾ ಲಸಿಕೆ ಸಿಕ್ಕಿದ್ದರೇ ಲಸಿಕೆ ನೀಡಿಕೆ ಆರಂಭವಾಗುತ್ತಿತ್ತು.  ಲಸಿಕೆ ಸಿಗದ ಕಾರಣ  ವಿಳಂಬ ಆಗುತ್ತಿದೆಯೆ  ಹೊರತು ಸರ್ಕಾರದ ವೈಪಲ್ಯ ಅಲ್ಲ.  ಕೋವಿಡ್ ಲಸಿಕೆ ಸಿಕ್ಕ ಕೂಡಲೇ ಲಸಿಕೆ ನೀಡಿಕೆ ಆರಂಭಿಸುತ್ತೇವೆ ಎಂದು ಹೇಳಿದರು.Covid vaccine -delay –over -18 years- CM BS Yeddyurappa

ಲಸಿಕೆ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ರಾಜ್ಯಕ್ಕೆ ಬರೋದು ವಿಳಂಬ ಆಗಿದೆ. ಹೀಗಾಗಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಯಲ್ಲಿ ತಡವಾಗುತ್ತಿದೆ. ಇದನ್ನು ಬಿಟ್ಟು ಬೇರೆ ಕಾರಣ ಇಲ್ಲ.  ಇಲ್ಲಿ  ಪ್ರಧಾನಿ ನರೇಂದ್ರ ಮೋದಿ ಹೆಸರನ್ನ ಅನಗತ್ಯವಾಗಿ ತರುವುದು ಬೇಡ ಎಂದು ಸಿಎಂ ಬಿಎಸ್ ವೈ ಹೇಳಿದರು.

Key words: Covid vaccine -delay –over -18 years- CM BS Yeddyurappa